ನವದೆಹಲಿ: ನಾವು ತ್ರಿಶೂಲ ಹಿಡಿದು ರಸ್ತೆಗಿಳಿಯದಿದ್ದರೆ ಮುಂದಿನ 5-7 ವರ್ಷಗಳಲ್ಲಿ ಭಾರತವು ಮುಸ್ಲಿಂ ರಾಷ್ಟ್ರವಾಗಲಿದೆ ಎಂದು ಬಿಜೆಪಿ ಮುಖಂಡ ಜೈ ಭಗವಾನ್ ಹೇಳಿದ್ದಾರೆ.
ಯುನೈಟೆಡ್ ಹಿಂದೂ ಫ್ರಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದು, ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಸ್ಲಿಂ ರಾಷ್ಟ್ರದ ಹೊರತಾಗಿ ಜೈ ಭಗವಾನ್ ಗೋಯಲ್ ಮುಸ್ಲಿಮರ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ.
ಎಲ್ಲ ಮುಸ್ಲಿಮರು ಒಂದೇ ಎಂಬ ಕಾರಣಕ್ಕೆ ಯಾವುದೇ ಮುಸಲ್ಮಾನರೂ ಪಿಎಫ್‌ಐನ್ನು ವಿರೋಧಿಸಿಲ್ಲ ಎಂದು ಹೇಳಿದ್ದಾರೆ. ಹಿಂದೂ ರಾಷ್ಟ್ರಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಭಾಷಣ ಮಾಡೋ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕುತ್ತಾರೆ,
ಮೊನ್ನೆಯಷ್ಟೇ ಬಿಜೆಪಿ ನಾಯಕರೊಬ್ಬರು ಕೆಟ್ಟದಾಗಿ ಬಟ್ಟೆ ಧರಿಸುವ ಹುಡುಗಿಯರು ಭಾರತೀಯ ಮಹಾಕಾವ್ಯ ರಾಮಾಯಣದ ರಾಕ್ಷಸಿಯಾದ ಶೂರ್ಪನಕಿಯಂತೆ ಕಾಣುತ್ತಾರೆ ಎಂದು ಬಿಜೆಪಿಯ ನಾಯಕರೊಬ್ಬರು ಕೈಲಾಶ್ ವಿಜಯವರ್ಗಿಯ ಹೇಳಿಕೆ ನೀಡಿದ್ದರು, ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು.