Sunday, October 1, 2023
spot_img
- Advertisement -spot_img

Cauvery Issue : ಕಾವೇರಿ ಪ್ರಾಧಿಕಾರ ಪಿಸಿಕಲ್ ಟೆಸ್ಟ್ ಮಾಡಿ, ಸತ್ಯಾಂಶ ತಿಳಿಯಬೇಕು: ಸಚಿವ ಪರಮೇಶ್ವರ್

ಮಂಡ್ಯ : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮಿತಿ ರಾಜ್ಯಕ್ಕೆ ಬಂದು ಅಂಕಿ-ಅಂಶ ಕಲೆಹಾಕಿ, ತಮಿಳುನಾಡಿಗೆ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದು ಗೃಹ ಸಚಿವ ಡಾ.‌ ಜಿ ಪರಮೇಶ್ವರ್ ಹೇಳಿದರು.

ಕಾವೇರಿ ಪ್ರಾಧಿಕಾರ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ಧಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ 35% ಮಳೆಯಾಗಿದೆ, ನಮ್ಮಲ್ಲೇ ನೀರಿನ ಕೊರತೆ ಇದೆ. ಹಲವು ಸಂದರ್ಭಗಳಲ್ಲಿ ನೀರಿನ ಕೊರತೆ ಬಗ್ಗೆ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ. ಆದರೂ ಯಾವ ಕಾರಣಕ್ಕೆ ನೀರು ಬಿಡಲು ಸೂಚಿಸಿದ್ದಾರೆ ಎಂದು ತಿಳಿಯುತಿಲ್ಲ. ನಮಗೆ ವಿಶ್ವಾಸ ಇದೆ, ಸಂಕಷ್ಟ ಸೂತ್ರ ರೂಪಿಸಿ ಈ ವರ್ಷಕ್ಕೆ ಪರಿಸ್ಥಿತಿ ತಕ್ಕಂತೆ ಆದೇಶ ಬರಲಿದೆ. ಕೇಂದ್ರ ತಜ್ಞರ ತಂಡ ಬರಬಾರದು ಎಂದು ನಾವು ಎಲ್ಲೂ ಹೇಳಿಲ್ಲ. ಬದಲಾಗಿ, ವಾಸ್ತವ ಸ್ಥಿತಿ ಬಗ್ಗೆ ಅಂಕಿ ಅಂಶ ಕಲೆ ಹಾಕಲಿ ಎಂದು ಅರ್ಜಿಗಳಲ್ಲಿ ಕೇಳಿದ್ದೇವೆ. ನಾವೂ ಕೂಡ ಪಿಸಿಕಲ್ ವೆರಿಫಿಕೇಷನ್ ಮಾಡಿ ಎಂದು ಮನವಿ ಮಾಡಿದ್ದೇವೆ. ಅವರು ಬಂದು ನೋಡಿದ್ರೆ ಮಾತ್ರ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಜಗದೀಶ್ ಶೆಟ್ಟರ್ ಮನಸ್ಸು ಇನ್ನೂ ಬಿಜೆಪಿಯಲ್ಲೆ ಇದೆ : ಅರವಿಂದ್ ಬೆಲ್ಲದ್

ಸೆ.21ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ ಇದೆ ಎಂದ ಅವರು, ಈ ಸಂದರ್ಭದಲ್ಲಿ ಕಾವೇರಿ ನೀರು ಬಿಟ್ಟಿದ್ದೀರಾ? ಸ್ವಲ್ಪವಾದರೂ ನೀರು ಬಿಡಬೇಕಲ್ವ ಎಂದು ಕೋರ್ಟ್ ಕೇಳುತ್ತದೆ. ಆ ಸಂದರ್ಭದಲ್ಲಿ ಕಾವೇರಿ ಪ್ರಾಧಿಕಾರದಿಂದ ಆದೇಶ ಬಂದ್ರು ನೀರು ಬಿಟ್ಟಿಲ್ಲ ಎಂದು ಹೇಳುವಂತೆ ಆಗಬಾರದು. ಹೀಗಾಗಿ ಸಚಿವರು 2 ದಿನ ನೀರು ಬಿಡ್ತೇವೆ ಅಂತ ಹೇಳಿದ್ದಾರೆ ಅಷ್ಟೇ, ಏಕೆಂದರೆ ಬೆಂಗಳೂರಿಗೆ ನೀರು ಕೊಡಲು ಆಗದಿರುವ ಪರಿಸ್ಥಿತಿ ಇದೆ. ನಾವಿನ್ನು ಅಕ್ಟೋಬರ್‌‌‌‌ ತಿಂಗಳಿನಲ್ಲಿ ಇದ್ದೇವೆ. ಈಗಲೇ, ಬರದ ಛಾಯೆ ಮೂಡಿದೆ. ಮಧ್ಯದಲ್ಲಿ ಮಳೆ ಬರದಿದ್ರೆ ಇನ್ನೂ ಕಷ್ಟವಾಗಲಿದೆ. ನಮಗೆ ವಿಶ್ವಾಸವಿದೆ ಪ್ರಾಧಿಕಾರ ನೀರು ಬಿಡಲು ಸೂಚಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕೆಟ್ಟ ಸರ್ಕಾರ ತೆಗೆಯಲು ಶಕ್ತಿ ಬರುತ್ತದೆ : ರಮೇಶ್ ಜಾರಕಿಹೊಳಿ

ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಮಾತನಾಡಿದ ಅವರು, ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ, ಅದರಲ್ಲಿ ತಪ್ಪೇನು ಇಲ್ಲ. ಎಂಪಿ ಚುನಾವಣೆ ದೃಷ್ಟಿಯಿಂದ ಅವರವರ ಸಮುದಾಯಗಳಿಗೆ ಸ್ಥಾನ ಮಾನ ಕೊಟ್ಟರೆ, ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗಬಹುದು. ಆದರೆ, ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ. ರಾಜಣ್ಣನಂತವರು, ನನ್ನಂತವರು ಹೇಳಿದ ಮಾತ್ರಕ್ಕೆ ಏನೂ ಆಗಲ್ಲ. ರಾಜಕೀಯ ನಿಂತ ನೀರಲ್ಲ, ನಿರಂತರ ಬದಲಾವಣೆ ಆಗುತ್ತದೆ. ಯಾರೋ ಒಬ್ಬರು ಡಿಸಿಎಂ ಆಗಬೇಕೆಂದು ಅಭಿಪ್ರಾಯ ಬರ್ತಿಲ್ಲ. ಬದಲಾಗಿ ಸಮುದಾಯಗಳಿಗೆ ಪಕ್ಷದ ಮೇಲೆ ನಂಬಿಕೆ ಹೆಚ್ಚಿಸಲು ಈ ಸಲಹೆಗಳು ಬರ್ತಿವೆ ಎಂದು ಅಭಿಪ್ರಾಯ ನೀಡಿದರು.

ಇದನ್ನೂ ಓದಿ : ಹಳೆಯ ಸಂಸತ್ ಭವನದ ಕುರಿತು ಭಾವನಾತ್ಮಕ ಪತ್ರ ಬರೆದ ಮಹಿಳಾ ಸಂಸದರು

ಸಿದ್ದರಾಮಯ್ಯ ಫುಲ್ ಟೈಮ್ ಸಿಎಂ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಸಂಪೂರ್ಣ ಅಧಿಕಾರದಲ್ಲಿ ಇರಬೇಕು. ಇಲ್ಲ, ಆಡಳಿತದ ಅರ್ಧ ಭಾಗದವರೆಗೆ ಇರಬೇಕು ಎಂಬುದನ್ನು ನಮಗ್ಯಾರಿಗೂ ಹೇಳಿಲ್ಲ. ಸಿಎಂ, ಡಿಸಿಎಂ ಹಾಗೂ ಯಾವುದೇ ಹುದ್ದೆಗಳು ನಮ್ಮಅಭಿಪ್ರಾಯದಲ್ಲಿ ನಡೆಯಲ್ಲ.ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಸ್ಪಷ್ಟನೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles