ಬೆಂಗಳೂರು: ಕೆಆರ್‌ಎಸ್‌ನಲ್ಲಿ ಸಂಗ್ರಹಣೆ ಕಡಿಮೆ ಇದ್ದರೂ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ವಿರುದ್ಧ ಹಾಗೂ ನೀರಿಗೆ ಬೇಡಿಕೆ ಇಟ್ಟಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದರು. ಕರ್ನಾಟಕ ಸರ್ಕಾರದವರದ್ದು ಬೃಹನ್ನಳೆ ವೇಷ; ತಮಿಳುನಾಡಿನ ಗಡಿ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಅವರು, ‘ಜಯಲಲಿತಾ ಕಾಲದಿಂದಲೂ ಕರ್ನಾಟಕಕ್ಕೆ ತೊಂದರೆ ಆಗ್ತಾ ಇದೆ; ನಮ್ಮ ರಾಜ್ಯದ ಜಲಾಶಯಗಳಲ್ಲೇ ನೀರಿಲ್ಲ. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ’ ಎಂದರು.
‘ತಮಿಳುನಾಡು ಸಿಎಂ ಸ್ಟಾಲಿನ್ ಮಾಡುತ್ತಿರುವ ಸ್ಟಂಟ್ ಇದು. ಸಂಪೂರ್ಣ ತಮಿಳುನಾಡು ಗಡಿ ಬಂದ್ ಮಾಡ್ತೇವೆ; ಕರ್ಣಾಟಕ ಸರ್ಕಾರದವರದ್ದು ಬೃಹನ್ನಳೆ ವೇಷ. ತಮಿಳುನಾಡು ಸರ್ಕಾರ ನಮಗೆ ತೊಂದ್ರೆ ಕೊಡ್ತಾ ಇರೋದು ಹೊಸತಲ್ಲ. ಜಯಲಲಿತಾ ಬದುಕಿದ್ದಾಗಿಂದಲೂ ತೊಂದ್ರೆ , ಪನ್ನೀರ್ ಸೆಲ್ವಂ, ಕರುಣಾನಿಧಿ, ಸ್ಟಾಲಿನ್ ಇದ್ದಾಗಲೂ ತೊಂದ್ರೆ ಇದೆ. ಕರ್ನಾಟಕ ಸರ್ಕಾರ ಪ್ರಾಮಾಣಿಕವಾಗಿ ನಡ್ಕೊಳ್ತಿಲ್ಲ; ಇದು ಆತ್ಮಗೌರವದ ಸಂಗತಿ. ಕೆಆರ್‌ಎಸ್, ಹಾರಂಗಿ, ಹೇಮಾವತಿ ಡ್ಯಾಂನಲ್ಲಿ ನೀರಿಲ್ಲ. ಬೆಂಗಳೂರಲ್ಲಿ ತಮಿಳ್ನಾಡಿನವರೆ ಜಾಸ್ತಿ ಕಾವೇರಿ ನೀರು ಕುಡಿತಿದ್ದಾರೆ. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ’ ಎಂದು ಹೇಳಿದರು.
ಇದನ್ನೂ ಓದಿ; ಕೆಆರ್‌ಎಸ್ ಡ್ಯಾಂ: ವಾರದಲ್ಲಿ 7 ಟಿಎಂಸಿ ನೀರು ಖಾಲಿ; ಮಂಡ್ಯ ರೈತರಲ್ಲಿ ಆತಂಕ!
‘ಸ್ಟಾಲಿನ್ ಅವರದ್ದು ಮೊದಲಿನಿಂದ ಸ್ಟಂಟ್; ಇದನ್ನ ಬೇರೆ ಎಲ್ಲಾದರೂ ಮಾಡಿ, ಕರ್ನಾಟಕದಲ್ಲಿ ಅಲ್ಲ. ಎಲ್ಲ ಗಡಿ ಬಂದ್ ಮಾಡಿ ಹೋರಾಟ ಮಾಡ್ತೇವೆ. ಕಾವೇರಿ ನೀರಿನಲ್ಲಿ ಕರ್ನಾಟಕಕ್ಕಿಂತ ತಮಿಳು ನಾಡಿನಲ್ಲೆ ಹೆಚ್ಚು ಬೆಳೆ ಬೇಳಿತಾರೆ. ಇಲ್ಲಿ ಕರ್ನಾಟಕ ಸರ್ಕಾರದವರು ಬೃಹನ್ನಳೆ ವೇಷ ಹಾಕಿದ್ದಾರೆ. ಒಂದು ಕಡೆ ಮೇಕೆದಾಟು ಬಗ್ಗೆ ಹೋರಾಟ ಮಾಡ್ತೇವೆ ಅಂತ ಪಾದಯಾತ್ರೆ ಮಾಡಿದ್ರು, ಇವತ್ತೇನಾಗಿದೆ? ಈಗ ನಮಗೆ ನೀರಿಲ್ಲ; ಸುಪ್ರೀಂ ಕೋರ್ಟ್ ನಲ್ಲಿ ನಮಗಾದ ಅನ್ಯಾಯದ ಬಗ್ಗೆ ಸಮರ್ಥ ವಾದ ಮಂಡಿಸಬೇಕು’ ಎಂದು ಆಗ್ರಹಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.