Wednesday, November 29, 2023
spot_img
- Advertisement -spot_img

ತಮಿಳುನಾಡಿಗೆ ಕಾವೇರಿ ನೀರು: ಎಮ್ಮೆಗೆ ಸಿಎಂ-ಡಿಸಿಎಂ ಫೋಟೋ ಅಂಟಿಸಿ ಆಕ್ರೋಶ

ಆನೇಕಲ್ : ತಮಿಳುನಾಡಿಗೆ ಕಾವೇರಿ ನೀರು ಹರಿಸೋದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆದಿದ್ದು, ಕರವೇ ಶಿವರಾಮೇಗೌಡ ಬಣದಿಂದ ಕಾವೇರಿಗಾಗಿ ರಸ್ತೆ ತಡೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶಿಸಿದ್ದಾರೆ.

ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ನೀರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿದ್ದಾರೆ. ಇಂದು ಕರ್ನಾಟಕ ಬಂದ್ ಹಿನ್ನಲೆ ರಾಮನಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡಲಾಗಿದ್ದು, ಎಮ್ಮೆಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಭಾವಚಿತ್ರ ಅಳವಡಿಸುವ ಮೂಲಕ ಆಕ್ರೋಶಿಸಿದ್ದಾರೆ.

ಕೊಪ್ಪಳದಲ್ಲಿ ಕರವೇ ಮುಖಂಡೆ ಏಕಾಂಗಿಯಾಗಿ ಪ್ರತಿಭಟನೆ

ವಿವಿಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಸರ್ಕಾರದ ವಿರುದ್ದ ಘೋಷಣೆ ಕೂಗಿ ಕೆಂಪೇಗೌಡ ಸರ್ಕಲ್ ನಿಂದ ಐಜೂರು ವೃತ್ತದವರೆಗೂ ಮೆರವಣಿಗೆ ಮಾಡಲಾಗಿದೆ. ಇನ್ನೂ ಕೊಪ್ಪಳದಲ್ಲಿ ಕರವೇ ಮುಖಂಡೆ ಏಕಾಂಗಿಯಾಗಿ ಪ್ರತಿಭಟಿಸಿದ್ದು, ನೀವು ನಿಮಗೆ ಸಹಕರಿಸಬೇಕು ಎಂದು ವಾದಮಾಡಿದ್ದಾರೆ, ಹೀಗಾಗಿ ಯುವ ಪ್ರಜಾ ವೇದಿಕೆ ಮುಖಂಡೆ ಬಿಬಿ ಬಿಬಿ ಜಾನ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಬಂದ್ ಮಾಡಿದ್ದ ಕುರುಬೂರು ನಿಯೋಗದಿಂದ ಸಿಎಂ ಭೇಟಿ

ದಾವಣಗೆರೆಯಲ್ಲಿ ಬೆಳಗ್ಗೆಯಿಂದಲೇ ಬೀದಿಗಿಳಿದ ಹೋರಾಟಗಾರರು

ಇನ್ನೂ ದಾವಣಗೆರೆಯಲ್ಲಿ ಬಂದ್ ಹಿನ್ನೆಲೆ ಬೆಳಗ್ಗೆಯಿಂದಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಹೋರಾಟಗಾರರು ಬೀದಿಗಿಳಿದಿದ್ದಾರೆ. ದಾವಣಗೆರೆಯ ಜಯದೇವ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದಿದ್ದು, ಕರುನಾಡು ಸಮರ ಸೇನೆಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ದ ಧಿಕ್ಕಾರ ಕೂಗಲಾಗಿದೆ. ಜಯದೇವ ಸರ್ಕಲ್ ನಲ್ಲಿ ಪೊಲೀಸರ ಬಿಗಿ ಭದ್ರತೆ ಮಾಡಲಾಗಿದೆ. ಇನ್ನೂ ಚಾಮರಾನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರೈತಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles