ಬೆಂಗಳೂರು : ಈ ಬಾರಿಯ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಲ ಮೂಲಗಳ ಸಂರಕ್ಷಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪಿಒಪಿಯಿಂದ ತಯಾರಿಸಿದ, ಭಾರ ಲೋಹಯುಕ್ತ ಬಣ್ಣದಿಂದ ಅಲಂಕರಿಸಿದ ಗಣೇಶನ ವಿಗ್ರಹಗಳ ಮಾರಾಟ ಮತ್ತು ವಿಸರ್ಜನೆ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಆದೇಶ ನೀಡಿದೆ. ಆದ್ದರಿಂದ ಜಲಚರಗಳ ಜೀವ ರಕ್ಷಣೆ, ನೀರಿನ ಆಕರಗಳ ಸಂರಕ್ಷಣೆಯ ಹೊಣೆಯನ್ನು ಅರಿತು ಮಣ್ಣಿನ ಗಣಪತಿಯನ್ನಷ್ಟೇ ಪೂಜಿಸೋಣ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಹೊಸ ಸಂಸತ್ ಭವನದಲ್ಲಿ ಇಂದಿನಿಂದ ವಿಶೇಷ ಅಧಿವೇಶನ
ರಾಷ್ಟೀಯ ಹಸಿರು ನ್ಯಾಯ ಮಂಡಳಿಯ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದ್ದಾರೆ.
‘ವಿಘ್ನನಿವಾರಕ ಗಣೇಶನು ಸರ್ವ ಸಂಕಷ್ಟಗಳನ್ನು ದೂರಮಾಡಿ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಸಂಭ್ರಮದ ಈ ಹಬ್ಬವು ಪರಿಸರಸ್ನೇಹಿಯೂ ಆಗಿರಲಿ. ನಾಡಬಾಂಧವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು’ ಎಂದು ಅವರು ಶುಭಕೋರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.