ಹುಬ್ಬಳ್ಳಿ : ನಾವು ಇಂಡಿಯಾ ಅಂತೀವಿ, ಭಾರತ ಅಂತೀವಿ ಇದು ಸಂವಿಧಾನದಲ್ಲಿದೆ, ಹೊಸದಾಗಿ ಡಿಬೇಟ್ ಶುರು ಮಾಡಿದ್ದೇ ಬಿಜೆಪಿ ಸರ್ಕಾರ, ಇದಕ್ಕೆಲ್ಲ ಕಾರಣ ರಾಜಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಇಂಡಿಯಾ ಅನ್ನೋ ಹೆಸರು ಇಟ್ಟುಕೊಂಡಿದ್ರು, ಇಂಡಿಯಾ ಹೆಸರಿಗೆ ಕೇಂದ್ರ ಸರ್ಕಾರ ಹೆದರಿದೆ ಅನ್ನಿಸುತ್ತೆ, ಇಂಡಿಯಾ ಪದ ಪ್ರಯೋಗ ಜಾಸ್ತಿ ಆದ್ರೆ ವಿಪಕ್ಷಗಳಿಗೆ ಪ್ರಚಾರ ಸಿಗತ್ತೆ ಅನ್ನೋ ಕಾರಣಕ್ಕೆ ಭಾರತ ಹೆಸರು ಪ್ರಸ್ತಾಪ ಮಾಡಲಾಗಿದೆ. ವೈಯಕ್ತಿಕವಾಗಿ ನಾನು ಭಾರತ ಅನ್ನೋದನ್ನ ಸ್ವಾಗತ ಮಾಡ್ತೀನಿ ಎಂದರು.
ಇದನ್ನೂ ಓದಿ : ‘ಹೆಸರಲ್ಲ ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ’
ಮೋದಿಜಿ ಪ್ರಧಾನಿಯಾಗಿ 9 ವರ್ಷ ಆಯ್ತು, ಇವಾಗ ಯಾಕೆ ನೆನಪಾಯ್ತು ಇದು ಒಳ್ಳೆಯದಲ್ಲ, ಮೋದಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳ ದಿನದಿಂದ ಹೇಳ್ತಿದ್ದಾರೆ, ಒಂದೇ ಚುನಾವಣೆ ಒಳ್ಳೆಯದು, ಹಿಂದೆ ವಿಧಾನಸಭೆ ಲೋಕಸಭೆ ಚುನಾವಣೆ ಒಂದೇ ಸಮಯದಲ್ಲಿ ನಡೆದಿವೆ, ಒಂದೇ ಕಾಲಕ್ಕೆ ಚುನಾವಣೆ ಅಂದ್ರೆ ಕೆಲ ರಾಜ್ಯಗಳ ಚುನಾವಣೆ ಮುಂದೆ ಹಾಕಬೇಕು ಎಂದು ತಿಳಿಸಿದರು.
ಒಂದು ದೇಶ ಒಂದು ಚುನಾವಣೆ ಆದ್ರೆ ಒಳ್ಳೆಯದೇ ಆದ್ರೆ, ಅದು ಮಾಡಕ್ಕಾಗಲ್ಲ ಎಂದು ಅಭಿಪ್ರಾಯಪಟ್ಟರು. ಉದಯನಿಧಿ ಸ್ಟಾಲಿನ್ ಹೇಳಿಕೆ ಅದು ವೈಯಕ್ತಿಕ, ಅದರ ಬಗ್ಗೆ ಕಾಮೆಂಟ್ ಮಾಡಲ್ಲ, ನನ್ನನ್ನು ಒತ್ತಾಯ ಪೂರ್ವಕವಾಗಿ ಬಿಜೆಪಿಯಿಂದ ಹೊರಗೆ ಹಾಕಿದ್ರು, ಈಶ್ವರಪ್ಪ ಅವರ ಮಟ್ಟಕ್ಕೆ ನಾನು ಇಳಿಯಲ್ಲ. ಪ್ರದೀಪ ಶೆಟ್ಟರ್ ಬಗ್ಗೆ ನಾನು ಮಾತಾಡಲ್ಲ, ಬಿಜೆಪಿಯಲ್ಲಿ ಕೆಲವರು ಕುದೀತೀದ್ದಾರೆ, ಈಗ ಏನಾಗಿದೆ ಪಕ್ಷದ ಸ್ಥಿತಿ ಎಂದು ಪ್ರಶ್ನಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.