ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್ ಕೊಡದೇ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಹೈ ಕಮಾಂಡ್ ಮಾತಿಗೆ ನಾನು ಒಪ್ಪಿಲ್ಲ, ನಾನು ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ನಿರ್ಧಾರದ ಬಗ್ಗೆ ಬೆಂಗಳೂರಿಗೆ ಹೋಗಿ ಕೆಲವರೊಂದಿಗೆ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಇನ್ನೂ ಇದೇ ವಿಚಾರವಾಗಿ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದು, ರಾಜ್ಯ ಸೇವೆ ಸಾಕು, ಕೇಂದ್ರಕ್ಕೆ ಬನ್ನಿ ಎಂದು ಆಹ್ವಾನ ನೀಡಲಾಗಿತ್ತು, ಆದ್ರೆ ಶೆಟ್ಟರ್ ಒಂದು ವಿಧಾನ ಸಭೆ ಕ್ಷೇತ್ರಕ್ಕೆ ಸೀಮಿತನಾಗಿರುತ್ತೇನೆ ಎಂದರು. ಶೆಟ್ಟರೇ , ನೀವು ಇಲ್ಲಿಯವರಗೂ ಬರಲು ಲಕ್ಷಾಂತರ ಕಾರ್ಯಕರ್ತರ ಬೆವರು, ಶ್ರಮ ಕಾರಣ, ಅವರ ಶಾಪ ನಿಮಗೆ ತಟ್ಟದೇ ಇರೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿದ್ದು, ಇಡೀ ಸಮಾಜ ಮೋದಿ ಆಡಳಿತ, ಬಿಜೆಪಿ ತತ್ತ್ವ ಸಿದ್ದಾಂತಗಳಿಗೆ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಪರ ಗಟ್ಟಿಯಾಗಿ ನಿಂತಿದೆ ಎಂದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದ್ರಲ್ಲಿ ಎರಡು ಮಾತಿಲ್ಲ, ಶೆಟ್ಟರ್ ರಾಜೀನಾಮೆ ಕಾರ್ಯಕರ್ತರಿಗೆ ಆಘಾತ ತಂದಿದೆ, ಅವರೆಲ್ಲ ಮನ ನೊಂದಿದ್ದಾರೆ ಎಂದು ಕಿಡಿಕಾರಿದರು.