ಚಿತ್ರದುರ್ಗ : ಕರ್ನಾಟಕದಲ್ಲಿ ದುರಾಡಳಿತ ಮತ್ತು ಗುಂಪುಗಾರಿಕೆ ಇದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ 136 ಸ್ಥಾನ ನೀಡಿದರೂ ಜನತೆಗೆ ಕಾಂಗ್ರೆಸ್ ಬಗ್ಗೆ ವಿಶ್ವಾಸವಿಲ್ಲ. ಕಾಂಗ್ರೆಸ್ ಶಾಸಕರು ವರ್ಗಾವಣೆ ಮತ್ತು ಆಡಳಿತದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಮಸಮಾಜದ ಕಲ್ಪನೆಯ ಬಗ್ಗೆ ಮುಖ್ಯಮಂತ್ರಿಗಳು ಬರೀ ಮಾತಿನಲ್ಲಿ ಹೇಳಬಾರದು ಎಂದಿರುವುದು ಬಿಜೆಪಿ, ಜೆಡಿಎಸ್ ಅಲ್ಲ, ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಮೂರು ತಿಂಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದೆ , ಐದು ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸಲು ವಿಫಲರಾಗಿದ್ದಾರೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ಇದನ್ನೂ ಓದಿ: ನೆದರ್ ಲ್ಯಾಂಡ್ ಪ್ರಧಾನಿ ಸ್ವಾಗತಿಸಿದ ಡಿಕೆ ಶಿವಕುಮಾರ್
ರಾಜ್ಯದಲ್ಲಿ ಕಾಂಗ್ರೆಸ್ ಕಿತ್ತೊಗೆಯಲು ಕೇಂದ್ರದ ವರಿಷ್ಠರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ, ಮೈತ್ರಿಗೆ ಬಿಜೆಪಿ ಕಾರ್ಯಕರ್ತರು ಬದ್ಧರಾಗಿರುತ್ತಾರೆ, ಕುಮಾರಸ್ವಾಮಿಯವನ್ನು ಒಂದು ವಾರದ ಹಿಂದೆ ಆರೋಗ್ಯ ವಿಚಾರಿಸಲು ಭೇಟಿ ಮಾಡಿದ್ದೆ, ನನಗೆ ಬಿಜೆಪಿ ಕಾರ್ಯಕರ್ತರೇ ಸರ್ವೋಚ್ಛ ಅವರ ರಕ್ಷಣೆಗೆ ನಾನು ಬದ್ಧ, ನಾನು ರಾಜಕಾರಣ ಮಾಡೋಲ್ಲ, ರಾಜಕೀಯನೇ ಬೇಡ, ಆದರೆ ಪಕ್ಷ ಎಲ್ಲಿ ಜವಾಬ್ದಾರಿ ನೀಡುತ್ತೋ ಅಲ್ಲಿ ಸೈನಿಕನ ರೀತಿ ಕೆಲಸ ಮಾಡ್ತೀನಿ ಎಂದರು.
ದೇಶದ ಮೂಲೆ ಮೂಲೆಗೂ ದೇಶ ಭಕ್ತಿಯನ್ನು ಹಬ್ಬಿಸಲು ನಮ್ಮ ಮಣ್ಣು ನಮ್ಮ ದೇಶ ಕಾರ್ಯಕ್ರಮ ಆಯೋಜಿಸಲಾಗಿದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳು ಸ್ವಾತಂತ್ರ ಹೋರಾಟಗಾರರ ನೆನಪಿಸಿಕೊಳ್ಳಬೇಕು,ಸ್ವಾತಂತ್ರ್ಯ ಸೇನಾನಿಗಳ ಅಮೃತ ವನವನ್ನು ನಿರ್ಮಿಸಿ ದೇಶದ ಎಲ್ಲೆಡೆಯಿಂದ ಮಣ್ಣು ತರಿಸಿ ಅವರಿಗೆ ಗೌರವಿಸಲಾಗುತ್ತದೆ,
ಅಮೃತ ವನವನ್ನು ವಿಶ್ವಕ್ಕೆ ಸಮರ್ಪಣೆ ಮಾಡಲಾಗುತ್ತದೆ, ಇಂತಹ ಯೋಜನೆಯನ್ನು ಪ್ರಧಾನಿ ಮೋದಿ ಹಾಗೂ ಪಕ್ಷದ ವರಿಷ್ಠರು ಹಾಕಿಕೊಂಡಿದ್ದಾರೆ, ದೇಶದ ಪ್ರತೀ ಸೇನಾನಿಗಳು, ಪ್ಯಾರಾ ಮಿಲಿಟರಿ, ಹಾಗೂ ಪೊಲೀಸ್ ಎಲ್ಲರ ಮನೆಗಳಿಗೆ ಭೇಟಿ ನೀಡಲಾಗುತ್ತದೆ, ಅವರಿಂದ ದೇಶದ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.