ನವದೆಹಲಿ: ಡೀಪ್‌ಫೇಕ್ ವಿಡಿಯೋಗಳ ಕುರಿತು ಸರ್ಕಾರ ಗಂಭೀರ ಚರ್ಚೆಗೆ ಮುಂದಾಗಿದ್ದು, ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆಗಳ ಜೊತೆ ಸಭೆ ನಡೆಸಲಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
ಡೀಪ್‌ಫೇಕ್ ಸಮಸ್ಯೆಯ ಕುರಿತು ಸರ್ಕಾರವು ಇತ್ತೀಚೆಗೆ ಕಂಪನಿಗಳಿಗೆ ನೋಟಿಸ್ ನೀಡಿದೆ ಮತ್ತು ಪ್ಲಾಟ್‌ಫಾರ್ಮ್‌ಗಳು ಸಹ ಈ ಕುರಿತು ಪ್ರತಿಕ್ರಿಯಿಸಿವೆ ಎಂದು ವೈಷ್ಣವ್ ತಿಳಿಸಿದರು. ಆದರೆ ಅಂತಹ ವಿಷಯದ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿ ಸಂಸ್ಥೆಗಳು ಕಠಿಣ ನಿಯಮ ಜಾರಿ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು: ಸಂಸದ ರಾಜಮೋಹನ್
ಅವರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಆದರೆ ಇನ್ನೂ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನಾವು ಭಾವಿಸುತ್ತೇವೆ. ನಾವು ಶೀಘ್ರದಲ್ಲೇ ಎಲ್ಲಾ ವೇದಿಕೆಗಳ ಸಭೆಯನ್ನು ನಡೆಸಲಿದ್ದೇವೆ. ಬಹುಶಃ ಮುಂದಿನ 3-4 ದಿನಗಳಲ್ಲಿ, ನಾವು ಆ ಸಭೆ ಮಾಡುತ್ತೇವೆ. ಡೀಪ್‌ಫೇಕ್ ವಿಡಿಯೋ/ಫೋಟೋಗಳ ಹಂಚಿಕೆ ಅಥವಾ ಅದರ ಖಚಿತತೆಗೆ ಕೃತಕ ಬುದ್ಧಿಮತ್ತೆಯ ವೇದಿಕೆಗಳಿಗೆ ಸೂಚಿಸಲಿದ್ದೇವೆ ಎಂದರು.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯ ರದ್ದುಗೊಳಿಸಲು ಖಲಿಸ್ತಾನಿ ಉಗ್ರನ ಬೆದರಿಕೆ!
ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಡೀಪ್‌ಫೇಕ್‌ಗಳು ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಬಹುದು ಮತ್ತು ಸಮಾಜದಲ್ಲಿ ಅಸಮಾಧಾನವನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದರು, ಮಾಧ್ಯಮಗಳು ಅದರ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರಿಗೆ ಶಿಕ್ಷಣ ನೀಡುವಂತೆ ಒತ್ತಾಯಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.