Wednesday, November 29, 2023
spot_img
- Advertisement -spot_img

ಉದ್ಯಮಿಗೆ ಬಹುಕೋಟಿ ವಂಚನೆ ಪ್ರಕರಣ : A3 ಆರೋಪಿ ಹಾಲಶ್ರೀ ಸಿಸಿಬಿ ವಶಕ್ಕೆ

ವಿಜಯನಗರ : ಉದ್ಯಮಿಯೊಬ್ಬರಿಗೆ ಬಿಜೆಪಿಯ ಶಾಸಕ ಸ್ಥಾನದ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಆರೋಪದ ಮೇಲೆ ಬಂಧಿತರಾಗಿರುವ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಜೊತೆಗೆ ಮೂರನೇ ಆರೋಪಿತ ಸ್ಥಾನದಲ್ಲಿರುವ ಹಾಲಶ್ರೀ ಸ್ವಾಮೀಜಿಯವರನ್ನು ಇಂದು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಹುಕೋಟಿ ವಂಚನೆಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದಿಂದ ಅಭಿನವ ಹಾಲಶ್ರೀ ಬೆಳಗ್ಗೆಯಿಂದ ಕಾಣೆಯಾಗಿದ್ದರು. ಹಿಂದೂಪರ ಸಂಘಟನೆಗಳಲ್ಲಿ ಗುರುಸಿಕೊಂಡಿರುವ ಹಾಲಶ್ರೀ, ಉದ್ಯಮಿ ಗೋವಿಂದ್ ಬಾಬು ಕಡೆದಿಂದ 1.50ಕೋಟಿ ರೂ. ಹಣ ಪಡೆದ ವಂಚನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಇದನ್ನೂ ಓದಿ : ‘ಚೈತ್ರಾ ಕುಂದಾಪುರ ತಪ್ಪು ಮಾಡಿದ್ರೆ ಕಾನೂನು‌ ಕ್ರಮ ಕೈಗೊಳ್ಳಲಿ’

ಈ ವಂಚನೆ ಪ್ರಕರಣದಲ್ಲಿ A1ಆರೋಪಿಯಾಗಿ ಚೈತ್ರಾ ಕುಂದಾಪುರ. , A3 ಆರೋಪಿಯಾಗಿರುವ ಅಭಿನವ ಹಾಲಶ್ರೀ. ಬೆಳಗಿನಿಂದ ಮೊಬೈಲ್ ಆಫ್ ಮಾಡಿಕೊಂಡಿದ್ದ ಸ್ವಾಮೀಜಿ ಮಠಕ್ಕೂ ಬಾರದೇ, ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆನ್ನಲಾಗಿತ್ತು.

ಆದರೆ ಇದೀಗ ಹಾಲಶ್ರೀ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಣ ವಾಪಸ್ಸು ನೀಡುವ ಪ್ರಯತ್ನವನ್ನು ಮಾಡಿರುವ ಹಾಲಶ್ರೀ, ಬಂಧನದ ಭೀತಿಯಿಂದ ಪಡೆದ ಹಣದಲ್ಲಿ ಸ್ವಲ್ಪ ಪ್ರಮಾಣದ ಹಣ ವಾಪಸ್ಸಾತಿಗೆ ಮುಂದಾಗಿದ್ದರು ಎನ್ನಲಾಗಿದೆ.

ನನ್ನ ಬಳಿ ಹಣ ಇಟ್ಟುಕೊಳ್ಳಲು ಆಗುವುದಿಲ್ಲ. ಹಣ ಇಟ್ಟುಕೊಂಡರೆ ನಿಮ್ಮ ಜೊತೆ ನನ್ನನ್ನು ಬಂಧಿಸುತ್ತಾರೆ. ನನ್ನ ಬಳಿ ಇರುವ ಸ್ವಲ್ಪ ಹಣವನ್ನು ವಾಪಸ್ಸು ಕೊಡುತ್ತೇನೆ ಎಂದು ಹೇಳಿದ್ದ ಹಾಲಶ್ರೀ ಸ್ವಾಮಿಜಿ ಹಾಗೆಯೇ ಸ್ವಲ್ಪ ಹಣವನ್ನು ವಾಪಸ್ಸು ನೀಡಿ ಬಚವಾಗಲು ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ.

ಗಮನಾರ್ಹ ಅಂಶವೆಂದರೆ ಈ ಸ್ವಾಮೀಜಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪ್ರಚೋದನಾಕಾರಿ ಭಾಷಣಗಳಿಂದ ಖ್ಯಾತಿಯಾಗಿದ್ದ ಚೈತ್ರಾ ಕುಂದಾಪುರ ಬಲಪಂಥೀಯ ಕಾರ್ಯಕರ್ತರು ಮತ್ತು ಹಿಂದುತ್ವವಾದಿಗಳಲ್ಲಿ ಜನಪ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಭಾಷಣಗಳಿಗೆ ಸಂಬಂಧಿಸಿದಂತೆ ಅವರು ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ.

ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಹಾಲಶ್ರೀ..

ಅಭಿನವ ಹಾಲಶ್ರೀ ಹಿಂದೂಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಸ್ವಾಮಿಜಿಯಾಗಿದ್ದು, ವೀರಶೈವ ಲಿಂಗಾಯಿತ ಮಠದ ಸ್ವಾಮಿಜಿಗಳಾಗಿದ್ದಾರೆ. ಪ್ರಖರವಾಗಿ ಹಿಂದೂ ಧರ್ಮದ ನಿಲುವುಗಳನ್ನು ಹೊಂದಿರುವ ಕಾವಿಧಾರಿಯಾಗಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles