ಬೆಂಗಳೂರು: ಬೈಂದೂರು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಪಡೆದು ವಂಚಿಸಿರುವ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ತಂಡವನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಪೊಲೀಸರ ವಶದಲ್ಲಿದ್ದಾಗಲೇ ‘ಇಂದಿರಾ ಕ್ಯಾಂಟೀನ್ ಬಿಲ್‌ಗಾಗಿ ಇದೆಲ್ಲಾ ನಡೆಯುತ್ತಿದೆ’ ಎಂದು ಹೇಳಿದ್ದಾ ಎ1 ಆರೋಪಿ ಚೈತ್ರಾ ಹೇಳಿಕೆ ಹಲವರನ್ನು ಗೊಂದಲಕ್ಕೆ ದೂಡಿದ್ದು, ಬಿಲ್‌ಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ಇದೀಗ ಸಿಸಿಬಿ ಪೊಲೀಸರು ಬಿಬಿಎಂಪಿ ಅಧಿಕಾರಿಗಳ ಬೆನ್ನುಬಿದ್ದಿದ್ದಾರೆ.
ಇಂದಿರಾ ಕ್ಯಾಂಟೀನ್ ಬಿಲ್ ಸಂಬಂಧ ಚೈತ್ರಾ ನೀಡಿದ್ದ ಹೇಳಿಕೆ ಅಧರಿಸಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೋಳಿಸಿದ್ದಾರೆ. ಈಗಾಗಲೇ ಒಂದು ಹಂತದ ತನಿಖೆ ಮುಗಿಸಿದ ಸಿಸಿಬಿ (CCB) ಟೀಮ್, ಬಿಬಿಎಂಪಿ ಅಧಿಕಾರಿಗಳನ್ನು ಗೋವಿಂದ ಬಾಬು ಅವರಿಗೆ ಸಂಬಂಧಿಸಿದ ಇಂದಿರಾ ಕ್ಯಾಂಟೀನ್ ಗುತ್ತಿಗೆ, ಬಾಕಿ ಬಿಲ್ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ; Nirmala Sitharaman : ಚೈತ್ರಾ ಕುಂದಾಪುರ ಹಾಡಿ ಹೊಗಳಿದ್ದ ನಿರ್ಮಲಾ ಸೀತಾರಾಮನ್ ; ಹಳೆಯ ಟ್ವೀಟ್ ವೈರಲ್
ಈಗಾಗಲೇ ಬಿಬಿಎಂಪಿಯ (BBMP) ಹಿರಿಯ ಅಧಿಕಾರಿಗಳ ಬಳಿ ಸಿಸಿಬಿ ಪೊಲೀಸರು ಮಾಹಿತಿ ಕೇಳಿದ್ದಾರೆ. ಜತೆಗೆ, ಇಂದಿರಾ ಕ್ಯಾಂಟೀನ್ ಊಟದ ಬಿಲ್ ಬಿಡುಗಡೆ ಮಾಡುವ ಅಧಿಕಾರಿಗಳ ಪೋನ್ ಕರೆ ಮಾಹಿತಿ ಕಲೆ ಹಾಕ್ತಿದ್ದಾರೆ ಎನ್ನಲಾಗಿದೆ.
ಪಾಲಿಕೆ ಅಧಿಕಾರಿಗಳ ಬಳಿ ಸಿಸಿಬಿ ಪೊಲೀಸರು ಕೇಳಿರೋ ಮಾಹಿತಿ ಏನು ಅನ್ನುವುದನ್ನು ನೋಡುವುದಾದರೆ, ಗೋವಿಂದ್ ಬಾಬು ಪೂಜಾರಿಗೆ ಸೇರಿದ ಕ್ಯಾಂಟೀನ್ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ, ಗೋವಿಂದ್ ಪೂಜಾರಿ ಎಷ್ಟು ವರ್ಷಗಳಿಂದ ಕ್ಯಾಂಟೀನ್ ಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇದುವರೆಗೆ ಅವರಿಗೆ ಎಷ್ಟು ಹಣ ಬಿಡಿಗಡೆ ಮಾಡಲಾಗಿದೆ? ಕಳೆದ ಎರಡು ವರ್ಷಗಳಿಂದ ಎಷ್ಟು ಬಾಕಿ ಹಣ ನೀಡಬೇಕಿತ್ತು, ಮೂರು ತಿಂಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದ್ದಿರಿ? ಎರಡು ವರ್ಷಗಳಿಂದ ₹55 ಕೋಟಿ ಬಾಕಿ ಇತ್ತು ಎನ್ನುವ ಮಾಹಿತಿ ಇದೆ. ಏಕಾಏಕಿ ಕಳೆದ ಎರಡು ತಿಂಗಳಲ್ಲಿ ಅಷ್ಟೊಂದು ಹಣ ಬಿಡುಗಡೆ ಮಾಡಿದ್ದಾದ್ರೂ ಹೇಗೆ? ಬಾಕಿ ಬಿಲ್ ಪಾವತಿಗೆ ಯಾರಾದ್ರೂ ಒತ್ತಡ ಹಾಕಿದ್ರಾ ಎಂಬ ಹಲವು ಪ್ರಶ್ನೆಗಳನ್ನು ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಇದನ್ನೂ ಓದಿ; EXCLUSIVE – ನಾವು ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ : ತುಷಾರ್ ಗಿರಿನಾಥ್
‘ಗೋವಿಂದ ಪೂಜಾರಿ (Govind Babu Poojary) ಬಾಕಿ ಬಿಲ್ ಬಿಡುಗಡೆಗೆ ಚೈತ್ರಾ ಏನಾದ್ರೂ ಮಧ್ಯಪ್ರವೇಶ ಮಾಡಿದ್ರಾ? ಕ್ಯಾಂಟೀನ್ ಬಾಕಿ ಬಿಲ್ ನಲ್ಲಿ ಹಲವರ ಕೈವಾಡ ಇದೆ ಎಂದು ಚೈತ್ರಾ ಕುಂದಾಪುರ ಈಗಾಗ್ಲೇ ನಮ್ಮ ಬಳಿ ಹೇಳಿಕೆ ನೀಡಿದ್ದಾರೆ. ಬಿಲ್ ಪಾವತಿಯಲ್ಲಿ ಯಾರದ್ರೂ ಸ್ವಾಮೀಜಿ ನಿಮಗೆ ಒತ್ತಡ ಹಾಕಿದ್ರಾ? ಇದುವರೆಗೆ ಗೋವಿಂದ್ ಪೂಜಾರಿಗೆ ಕೊಟ್ಟಿರೋ ಬಾಕಿ ಮೊತ್ತದ ಪೂರ್ಣ ಮಾಹಿತಿ ಕೊಡಿ’ ಎಂದು ಸಿಸಿಬಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳ ಬೆನ್ನುಬಿದ್ದಿದ್ದಾರೆ ಎನ್ನಲಾಗಿದೆ.
ವರದಿ: ಮಹೇಶ್ ಸಿ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.