Sunday, September 24, 2023
spot_img
- Advertisement -spot_img

BREAKING NEWS : ಚೈತ್ರಾ ಕುಂದಾಪುರ ವಂಚನೆ ಪ್ರಕರಣ, ಒರಿಸ್ಸಾದಲ್ಲಿ ಹಾಲಶ್ರೀ ಅರೆಸ್ಟ್

ಬೆಂಗಳೂರು: ಚೈತ್ರಾ ಕುಂದಾಪುರ ಉದ್ಯಮಿಗೆ ಬಿಜೆಪಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಲೆಮಾರಿಸಿಕೊಂಡಿದ್ದ ಹಾಲಶ್ರೀಯನ್ನ ಒರಿಸ್ಸಾದಲ್ಲಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ಬೀದರ್ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ

ಸಂಜೆ ವೇಳೆ ಸ್ಚಾಮೀಜಿಯನ್ನ ವಿಮಾನದ ಮೂಲಕ ಕರೆ ತರುವ ಸಾಧ್ಯತೆ ಇದೆ. ಹಾಲಶ್ರೀ ಸ್ವಾಮೀಜಿ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಶನಿವಾರ ತೀವ್ರ ವಿಚಾರಣೆಗೊಳಪಡಿಸಿದರು.

ಅಭಿನವ ಹಾಲಶ್ರೀ ಹೈದರಾಬಾದ್ ಮೂಲಕ ಒಡಿಸ್ಸಾ ಹಾಗೂ ಬಿಹಾರ ಕಡೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. ಇದಕ್ಕಾಗಿ ಸಿಸಿಬಿ ಪೊಲೀಸರು ಮೂರು ವಿಶೇಷ‌ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಅಭಿನವ ಹಾಲಶ್ರೀ ಒಂದೊಂದು ಗಂಟೆಗೆ ಒಂದೊಂದ್ ಲೊಕೇಷನ್ ಚೇಂಜ್ ಮಾಡ್ತಿದ್ದ. ಸದ್ಯ ಒಡಿಸ್ಸಾ ದಲ್ಲಿ ಸಿಸಿಬಿ ಸೆರೆ ಸಿಕ್ಕಿದ್ದಾರೆ.

ಇದನ್ನೂ ಓದಿ : ಅನರ್ಹತೆಗೆ ತಡೆ ಬೆನ್ನಲ್ಲೇ ದೆಹಲಿಗೆ ತೆರಳಿದ ಪ್ರಜ್ವಲ್; ವಿಶೇಷ ಅಧಿವೇಶನದಲ್ಲಿ ಭಾಗಿ

ಪ್ರಕರಣದ 3ನೇ ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು, ತನಿಖಾ ತಂಡವು ಅವರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದೆ. ಈ ನಡುವೆ ಶ್ರೀಗಳ ಕಾರು ಚಾಲಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಈ ವೇಳೆ ‘ತುರ್ತು ಕೆಲಸವಿರುವುದಾಗಿ ಹೊರಗಡೆ ಹೋದ ಶ್ರೀಗಳು ಪುನಃ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಚಾಲಕನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ.

ಹಾಲಾಶ್ರೀಯನ್ನ ಮೊದಲು ಓಡಿಸ್ಸಾ ಪೋಲೀಸರ ಹಾಗೂ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಿದ್ದಾರೆ. ನಂತರ ಮದ್ಯಾಹ್ನ ವಿಮಾನದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬರುವ ಸಾಧ್ಯತೆ ಇದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles