ಉಡುಪಿ: ಚೈತ್ರಾ ಕುಂದಾಪುರ ವಂಚನೆ ಕೇಸ್‌ನಲ್ಲಿ ಆರೋಪಿಯಾಗಿರುವ ಶ್ರೀಕಾಂತ್ ನಾಯಕ್ ನನ್ನು ಬೈಂದೂರು, ಕುಂದಾಪುರ ಹಾಗೂ ಬ್ರಹ್ಮಾವರಕ್ಕೆ ಸ್ಥಳ ಮಹಜರಿಗಾಗಿ ಕರೆತಂದಿದ್ದಾರೆ.
ಹಣ, ಆಸ್ತಿ ಪತ್ರ, ಜಮೀನು ಖರೀದಿಸಿರುವ ಶಂಕೆ ಹಿನ್ನೆಲೆ ಆತನ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯ ಅಂಗವಾಗಿ ಸ್ಥಳ ಮಹಜರು ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನ ಊಪ್ಪೂರು ಬಳಿ ರಿಕವರಿ ಪ್ರಕ್ರಿಯೆ ನಡೆಸಲಾಗಿದೆ. ಇಲ್ಲಿನ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ರಿಕವರಿ ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಕೇಸ್; ಹಣ ಪಡೆದ ಸ್ವಾಮೀಜಿಯಿಂದ ಹತ್ತಾರು ಕಡೆ ಹೂಡಿಕೆ
ಇನ್ನೊಂದೆಡೆ ಚೈತ್ರಾ ಕುಂದಾಪುರ ಸಿಸಿಬಿ ವಶದಲ್ಲಿದ್ದು, ತೀವ್ರ ವಿಚಾರಣೆ ನಡೆದಿದೆ. ಆಕೆ ಸಿಸಿಬಿ ಅಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಪ್ರಕರಣದ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ತಲೆಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಯುತ್ತಿದೆ. ಸ್ವಾಮೀಜಿ ಪಡೆದ ಒಂದೂವರೆ ಕೋಟಿ ರೂಪಾಯಿಯನ್ನು ಹಲವು ಕಡೆ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಗೋವಿಂದ ಬಾಬು ಪೂಜಾರಿ ಹಣ ವಾಪಸ್ ಕೇಳಿದಾಗ ಹಣ ನೀಡಲಾಗದೆ ಇಕ್ಕಟ್ಟಿಗೆ ಸಿಲುಕಿದ್ದರು.
ಇದನ್ನೂ ಓದಿ: ಆರ್‌ಎಸ್‌ಎಸ್‌ಗೆ ದೇಶ ಭಕ್ತಿಯ ಇತಿಹಾಸವಿಲ್ಲ : ಪ್ರಿಯಾಂಕ್ ಖರ್ಗೆ
ಈ ನಡುವೆ ಗೋವಿಂದ ಬಾಬು ಪೂಜಾರಿಗೆ ನೀಡಲೆಂದು ಮತ್ತೊಬ್ಬರ ಬಳಿ ಸುಮಾರು 10 ಕೋಟಿ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಉದ್ಯಮಿಗೆ ಸ್ವಲ್ಪ ಹಣ ನೀಡಿ ಕಣ್ಣೊರೆಸುವ ಯತ್ನಕ್ಕೆ ಸ್ವಾಮೀಜಿ ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.