ಬೆಂಗಳೂರು: ಸಿಸಿಬಿಯಿಂದ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಹಣಕಾಸಿನ ವ್ಯವಹಾರವನ್ನು ಸಿಸಿಬಿ ಜಾಲಾಡುತ್ತಿದೆ.
ಗೋವಿಂದ ಬಾಬು ಪೂಜಾರಿ ಅವರಿಂದ ಪಡೆದಿರುವ ಹಣದ ಬಗ್ಗೆ ತನಿಖೆ ನಡೆಸಲಾಗ್ತಿದೆ, ಅವರಿಂದ ಯಾವ ರೂಪದಲ್ಲಿ ಹಣ ಪಡೆದಿದ್ರೂ ಎನ್ನುವ ಬಗ್ಗೆ ಜೊತೆಗೆ ಅಭಿನವ ಶ್ರೀ ಗಳಿಗೆ 1.5 ಕೋಟಿ ಹಣ ನೀಡಿರುವ ಬಗ್ಗೆಯೂ ಸಿಸಿಬಿ ತನಿಖೆ ನಡೆಸಲಿದೆ.
ಈ ವಿಚಾರಕ್ಕೆ ಸಂಬಂಧಿಸಿ ಸಿಸಿಬಿ ಅಕೌಂಟ್ಸ್ ಡಿಟೈಲ್ಸ್ ನ್ನು ಅಧಿಕಾರಿಗಳು ಪಡೆಯಲಿದ್ದಾರೆ. ಕೋಟಿಗಟ್ಟಲೇ ವ್ಯವಹಾರ ಆಗಿರೋದ್ರಿಂದ ಗೋವಿಂದ ಪೂಜಾರಿಗೂ ಸಿಸಿಬಿ ನೋಟಿಸ್ ನೀಡಲಿದ್ದಾರೆ. ಅಂದಹಾಗೆ ಗಗನ್ ಗೌಡ ಪಾತ್ರದ ಬಗ್ಗೆ ಹಾಗೂ ಚೈತ್ರ ಕುಂದಾಪುರಗೆ ಇವನು ಯಾವಾಗಿಂದ ಪರಿಚಯ ಇನ್ನೂಳಿದ ಆರೋಪಿಗಳಿಗೂ ಚೈತ್ರಗೂ ಏನು ಸಂಬಂಧ ? ಎನ್ನುವ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಲಿದೆ.
ಅಷ್ಟೇ ಅಲ್ಲದೇ ಉಳಿದ ಆರು ಆರೋಪಿಗಳ ಬ್ಯಾಂಕ್ ನ ಡೀಟೇಲ್ಸ್ ನೀಡುವಂತೆ ಸಿಸಿಬಿಯಿಂದ ಬ್ಯಾಂಕ್ ಗೆ ಪತ್ರ ಬರೆದಿದ್ದು, ಯಾವ ರೀತಿಯಾಗಿ ವ್ಯವಹಾರ ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ , ಇಷ್ಟೊಂದು ಹಣವನ್ನ ಕ್ಯಾಶ್ ರೂಪದಲ್ಲಿ ನೀಡಿರುವ ಸಾಧ್ಯತೆಯೇ ಹೆಚ್ಚು ಎಂದಿದ್ದು, ಅಕೌಂಟ್ ಟ್ರ್ಯಾನ್ಸ್ ಆ್ಯಕ್ಷನ್ ವ್ಯವಹಾರ ಆಗಿದ್ಯಾ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಲ್ಲ ಆರೋಪಿಗಳ ಬ್ಯಾಂಕ್ ಡೀಟೇಲ್ಸ್ ಗಳನ್ನು ಸಹ ಪೊಲೀಸರು ಪರಿಶೀಲನೆ ಮಾಡಲಿದ್ದು, ಸದ್ಯದ ಮಟ್ಟಿಗೆ ಎಲ್ಲ ಆರೋಪಿಗಳ ಅಕೌಂಟ್ ಸ್ಥಗಿತಗೊಳಿಸಲು ತಿಳಿಸಿದೆ.
ಇನ್ನೂ ವಿಚಾರಣೆ ವೇಳೆ ಬಿಜೆಪಿಯ ಕೆಲ ನಾಯಕರಿಗೆ ಹಣ ನೀಡಿರುವ ಬಗ್ಗೆ ಮಾಹಿತಿಯನ್ನು ಚೈತ್ರಾ ಬಾಯ್ಬಿಟ್ಟಿದ್ದಾರೆ, ಹಾಲಶ್ರೀ ಮುಖಾಂತರ ಹಣ ನೀಡಲಾಗಿದೆ ಎಂದಿರುವ ಚೈತ್ರಾ , ಗೋವಿಂದ ಪೂಜಾರಿಗೆ ಟಿಕೆಟ್ ಕೊಡಿಸುವ ಬಗ್ಗೆ ಚರ್ಚೆ ನಡೆದ ನಂತರ ಹಾಲಶ್ರೀ ಸ್ವಾಮೀಜಿ ಕೆಲ ಬಿಜೆಪಿ ನಾಯಕರನ್ನ ಭೇಟಿ ಮಾಡಿಸಿದ್ರು, ಟಿಕೆಟ್ ಬೇಕು ಅಂದ್ರೆ ಬಿಜೆಪಿ ನಾಯಕರಿಗೆ ದುಡ್ಡು ನೀಡಬೇಕೆಂದು ಸ್ವಾಮೀಜಿ ಹಣ ಪಡೆದಿದ್ದರು.
ವಿಚಾರಣೆ ವೇಳೆ ದೊಡ್ಡ ದೊಡ್ಡ ನಾಯಕರ ಹೆಸರು ಹೇಳಿರುವ ಚೈತ್ರಾ ಕುಂದಾಪುರ, ಸ್ವಾಮೀಜಿಯೇ ಮುಖ್ಯ, ಅವರ ಬಳಿಯೇ ಎಲ್ಲಾ ಮಾಹಿತಿ ಇದೆ ಎನ್ನುತ್ತಿರುವ ಚೈತ್ರಾ, ದುಡ್ಡಿನ ವ್ಯವಹಾರ ಅವರೇ ಮಾಡ್ತಿದ್ರು ಎಂದು ಸಿಸಿಬಿ ಡಿಸಿಪಿ ಅಬ್ದುಲ್ ಅಹ್ಮದ್ ಎದುರು ಕಣ್ಣೀರು ಹಾಕಿದ್ದಾರೆ, ಅಷ್ಟೇ ಅಲ್ಲದೇ ಚೈತ್ರಾಳ ಸಂಪೂರ್ಣ ಹೇಳಿಕೆಯನ್ನ ವೀಡಿಯೊ ಚಿತ್ರೀಕರಣ ವಿಚಾರಣೆ ವೇಳೆ ಮಾಡಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.