Monday, December 4, 2023
spot_img
- Advertisement -spot_img

ಬಂಧನಕ್ಕೂ ಮುನ್ನ ಬೀದರ್ ಗೆ ಭೇಟಿ ನೀಡಿದ್ದ ಚೈತ್ರಾ ಕುಂದಾಪುರ

ಬೀದರ್ : 7 ಕೋಟಿ ವಂಚಿಸಿರುವ ಪ್ರಕರಣದಲ್ಲಿ ನಿನ್ನೆ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿದ್ದು, ಇದರ ಮೂರು ದಿನಗಳ ಹಿಂದೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಹಾಗೂ ಭಾಲ್ಕಿಗೆ ಭೇಟಿ ಕೊಟ್ಟಿದ್ದರು.

ಸೆಪ್ಟೆಂಬರ್ 10 ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ಹಾಗೂ ಭಾಲ್ಕಿ ಪಟ್ಟಣಕ್ಕೆ ಭೇಟಿ ನೀಡಿದ್ದರು. ಬಳಿಕ ಅದೇ ಪಟ್ಟಣದ ಈಶ್ವರ್ ರಮ್ಮಾ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತನ ಮನೆಗೆ ಹೋಗಿದ್ದರು. ಅಲ್ಲಿಂದ ಚೈತ್ರಾ ಕುಂದಾಪುರ ಹುಮ್ನಾಬಾದ್ ಜಾದವ್ ಎಂಬುವರ ಮನೆಗೆ ಭೇಟಿ ಕೊಟ್ಟಿದ್ದರು. ನಂತರ ಅದೇ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿಯಲ್ಲಿ ಚೈತ್ರಾ ಪಾಲ್ಗೊಳ್ಳಬೇಕಿತ್ತು. ಆದರೆ ಉಪಹಾರ ಸೇವಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಕುಂದಾಪುರಕ್ಕೆ ವಾಪಾಸ್ ಆಗಿದ್ದಾರೆ.

ಇದನ್ನೂ ಓದಿ : ವಂಚನೆ ಕೇಸ್​ಗೆ ಟ್ವಿಸ್ಟ್ : ಇಂದಿರಾ ಕ್ಯಾಂಟೀನ್ ಹೆಸರೇಳಿದ್ದೇಕೆ ಚೈತ್ರಾ ಕುಂದಾಪುರ?

ಬಾಲ್ಕಿ ಹಾಗೂ ಹುಮ್ನಾಬಾದ್ ನಲ್ಲಿರುವ ಹಿಂದೂ ಕಾರ್ಯಕರ್ತರ ಮನೆಗೆ ಬೆಟ್ಟಿ ಕೊಟ್ಟು ಇನ್ನೇನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಚೈತ್ರಾ ಅವರಿಗೆ ಒಂದು ಫೋನ್ ಕಾಲ್ ಬಂದಿದೆ. ಕಾಲ್ ನಲ್ಲಿ ಮಾತನಾಡಿದ ತಕ್ಷಣ ಚೈತ್ರಾ ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ರದ್ದು ಮಾಡಿ ಕುಂದಾಪುರಕ್ಕೆ ತೆರಳಿದ್ದಾರೆ. ಕಾರ್ಯಕ್ರಮಕ್ಕೆ ಬಂದು ತರಾತುರಿಯಲ್ಲಿ ತೆರಳುವಷ್ಟು ಮುಖ್ಯವಾದ ವಿಚಾರ ಏನಿತ್ತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ : Hampi Utsav 2023 : ಕವಿದ ಬರ ಕಾರ್ಮೋಡ : ವಿಶ್ವವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ

ಏನಿದು ಚೈತ್ರಾ ಕುಂದಾಪುರ ಪ್ರಕರಣ?

ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಮೇಲೆ ಹಿಂದುತ್ವ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು 10 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಗಿದೆ.ಈ ಕೇಸ್‌ನಲ್ಲಿ ಚೈತ್ರಾ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ, ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಆದೇಶ ಹೊರಡಿಸಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles