ಬೆಂಗಳೂರು : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ಟೀಂ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಇಂದು ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆ ತರುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚೈತ್ರಾ ಕುಂದಾಪುರ, ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಇಷ್ಟೆಲ್ಲಾ ಮಾಡಿದ್ದಾರೆ. ಸ್ವಾಮೀಜಿ ಅರೆಸ್ಟ್ ಆಗಲಿ ಸತ್ಯ ಹೊರಬರುತ್ತೆ. ದೊಡ್ಡ ದೊಡ್ಡವರ ಹೆಸರು ಹೊರಬರುತ್ತೆ ಎಂದು ಹೇಳಿದ್ದಾರೆ.
ಏನಿದು ಚೈತ್ರಾ ಕುಂದಾಪುರ ಹೇಳಿದ ಇಂದಿರಾ ಕ್ಯಾಂಟಿನ್ ಬಿಲ್ ಕಥೆ?
ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಗೋವಿಂದ ಬಾಬು ಅವರೇ ಷಡ್ಯಂತ್ರ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ಗಂಭೀರ ಆರೋಪ ಮಾಡಿದ್ದಾರೆ. ಪೊಲಿಟಿಕಲ್ 360ಗೆ ಲಭ್ಯವಾದ ಮಾಹಿತಿ ಪ್ರಕಾರ, 98 ಚೆಫ್ ಟ್ಯಾಕ್ ಎಂಬ ಕಂಪನಿ ಮೂಲಕ 2017 ರಿಂದ ಗೋವಿಂದ ಬಾಬು ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದಾರೆ. ಗೋವಿಂದ ಬಾಬು ಅವರಿಗೆ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ನ ಬಾಕಿ ಬಿಲ್ 35 ಕೋಟಿ ರೂಪಾಯಿ ಬರಲು ಬಾಕಿಯಿದೆಯಂತೆ. ಚೈತ್ರಾಳನ್ನು ಲಾಕ್ ಮಾಡಿಕೊಡು, ಬಿಲ್ ಬಿಡುಗಡೆ ಮಾಡ್ತೀವಿ ಎಂದು ಗೋವಿಂದ ಬಾಬುಗೆ ಸೂಚಿಸಿದ್ದಾರೆ. ಈ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ.
ಇದನ್ನೂ ಓದಿ : ಚೈತ್ರಾ ಕುಂದಾಪುರ ವಂಚನೆ ಕೇಸ್ : ಹಾಲಮಠದಲ್ಲೇ ನಡೆದಿತ್ತಾ₹7 ಕೋಟಿ ಡೀಲ್?
ಚೈತ್ರಾ ಅವರನ್ನು ಲಾಕ್ ಮಾಡು ಎಂದವರು ಯಾರು? ಯಾಕಾಗಿ ಚೈತ್ರಾ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಚೈತ್ರಾ ಆರೋಪಿಸಿರುವುದು ನಿಜಾನಾ? ಈ ಎಲ್ಲಾ ವಿಚಾರಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದು ಬರಬೇಕಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.