ನವದೆಹಲಿ : ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ 104ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3, ಜಿ 20 ಶೃಂಗಸಭೆ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.
ಚಂದ್ರಯಾನ ನವ ಭಾರತದ ಸ್ಫೂರ್ತಿಯ ಸಂಕೇತ : ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಚಂದ್ರಯಾನ-3ರ ಯಶಸ್ಸನ್ನು ಪ್ರಸ್ತಾಪಿಸಿದ ಪ್ರಧಾನಿ, ಚಂದ್ರಯಾನ ‘ನವ ಭಾರತದ ಸ್ಫೂರ್ತಿಯ ಸಂಕೇತವಾಗಿದೆ’ ಎಂದರು. ಚಂದ್ರಯಾನ ಯೋಜನೆಯಲ್ಲಿ ಮಹಿಳಾ ವಿಜ್ಞಾನಿಗಳು ಮತ್ತು ಮಹಿಳಾ ಇಂಜಿನಿಯರ್ ಗಳು ಪಾಲ್ಗೊಂಡಿದ್ದು, ಇದು ಮಹಿಳಾ ಶಕ್ತಿಗೆ ಸಾಕ್ಷಿಯಾಗಿದೆ. ಚಂದ್ರಯಾನದ ಕುರಿತು ಎಷ್ಟು ಹೇಳಿದರೂ ತೀರದು ಎಂದು ಹೇಳಿದರು.
ಜಿ20ಗೆ ಭಾರತ ಸಣ್ಣದ್ದ : ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಜಿ 20 ಜಾಗತಿಕ ನಾಯಕರ ಸಭೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಜಿ 20 ಸಭೆಗೆ ಭಾರತ ಸಂಪೂರ್ಣ ರೀತಿಯಲ್ಲಿ ಸಜ್ಜಾಗಿದೆ. ಸುಮಾರು 40 ದೇಶಗಳ ಮುಖಂಡರು ಮತ್ತು ಜಾಗತಿಕ ಸಂಸ್ಥೆಗಳ ನಾಯಕರು ದೆಹಲಿಗೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ ತಿಂಗಳು ಭಾರತ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಲಿದೆ ಎಂದರು.
ಇದನ್ನೂ ಓದಿ : ‘ಇಸ್ರೋ ಬಿಜೆಪಿಯ 2024ರ ಚುಣಾವಣೆಯ ಪ್ರಚಾರ ಅಸ್ತ್ರವಾಗಿದೆ’
ಬ್ರಿಯಾನ್ ಡಿ ಖರ್ಪ್ರಾನ್ ಶ್ಲಾಘಿಸಿದ ಮೋದಿ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮೇಘಾಲಯದ ಬ್ರಿಯಾನ್ ಡಿ ಖರ್ಪ್ರಾನ್ ಅವರ ಹೆಸರು ಪ್ರಸ್ತಾಪಿಸಿದರು. ಖರ್ಪ್ರಾನ್ ಅವರು ಸುಮಾರು 1,700 ಕ್ಕೂ ಹೆಚ್ಚು ಗುಹೆಗಳನ್ನು ತಮ್ಮ ತಂಡದೊಂದಿಗೆ ಪತ್ತೆ ಹಚ್ಚಿ ವಿಶ್ವ ಗುಹೆ ನಕ್ಷೆಯಲ್ಲಿ ಭಾರತವನ್ನೂ ಸೇರಿಸಿದ್ದಾರೆ ಎಂದು ಶ್ಲಾಘಿಸಿದರು.
ಕ್ರೀಡಾಪಟುಗಳಿಗೆ ಅಭಿನಂದನೆ : ಚೀನಾದಲ್ಲಿ ನಡೆದ ವಿಶ್ವ ವಿದ್ಯಾನಿಲಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಮತ್ತು ಪದಕ ಗೆದ್ದ ಭಾರತದ ಕ್ರೀಡಾಪಟುಗಳನ್ನು ಮೋದಿ ಅಭಿನಂದಿಸಿದರು. ಕ್ರೀಡಾ ವಿಭಾಗದಲ್ಲಿ ಭಾರತ ನಿರಂತರ ಸಾಧನೆ ಮಾಡ್ತಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.