ನವದೆಹಲಿ : ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಇಂದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ಈ ಮೂಲಕ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ.
ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು, ಜೊತೆಗೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ದೂರದೃಷ್ಟಿ, ನೆಹರೂ ಹಾಕಿಕೊಟ್ಟ ಅಡಿಪಾಯ ಚಂದ್ರಯಾನ-3ರ ಯಶಸ್ಸಿಗೆ ಕಾರಣ ಎಂದು ಹೇಳಿದೆ.
ಇದನ್ನೂ ಓದಿ : WOW: ‘ವಿಕ್ರಂ’ ಸೆರೆ ಹಿಡಿದ ಚಂದ್ರನ ಮೊದಲ ಫೋಟೋ ಹೇಗಿದೆ ನೋಡಿ
1962ರಲ್ಲಿ ನೆಹರೂ ಅವರು INCOSPAR ಸ್ಥಾಪಿಸಿದರು. 1969ರಲ್ಲಿ ಇಂದಿರಾ ಗಾಂಧಿ ಅದನ್ನು ಇಸ್ರೋ (ISRO) ಎಂದು ಮರುನಾಮಕರಣ ಮಾಡಿದರು. 2023ರವರೆಗೆ ಇಸ್ರೋ 400ಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆ ಮಾಡಿದೆ. ನಾವು ಚಂದ್ರನನ್ನು ತಲುಪಿದ್ದೇವೆ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ತಿಳಿಸಿದೆ.
ಟ್ವೀಟ್‌ನಲ್ಲಿ 1962ರಿಂದ 2013ರವರೆಗಿನ ಕಾಂಗ್ರೆಸ್ ಅವಧಿಯ ಇಸ್ರೋ ಸಾಧನೆಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದೆ. ಅತ್ತ ಬಿಜೆಪಿ ಕೂಡ ಚಂದ್ರಯಾನದ ಯಶಸ್ಸನ್ನು ಪ್ರಧಾನಿ ಮೋದಿಯವರ ಯಶಸ್ಸು ಎಂಬಂತೆ ಬಿಂಬಿಸಿ ಟ್ವೀಟ್‌ಗಳ ಸುರಿಮಳೆ ಹರಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.