ಆನೇಕಲ್: ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಹಿನ್ನೆಲೆ, ಆನೇಕಲ್ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆಯಿತು. ಇಸ್ರೋ ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಗೆ ಕಾರ್ಯಕರ್ತರ ಮೆಚ್ಚುಗೆ ವ್ಯಕ್ತವಾಗಿದ್ದು, ಇಸ್ರೋ ಸಂಸ್ಥೆಗೆ ಜೈಕಾರ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು
ಚಂದ್ರನಂಗಳದಲ್ಲಿ ಭಾರತದ ಸಾಧನೆ ಹಿನ್ನೆಲೆ ಚಂದ್ರಯಾನ ಸಕ್ಸಸ್ ಆಗುತ್ತಿದ್ದಂತೆ CTE ಸಂಸ್ಥೆಯ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಸಂತಸ ಪಟ್ಟಿದ್ದಾರೆ. ಇನ್ನೂ ಧಾರವಾಡ ಜಿಲ್ಲೆಯಲ್ಲಿ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡಿಗ್ ಹಿನ್ನೆಲೆ ಧಾರವಾಡಲ್ಲಿ ಬಿಜೆಪಿ ಕಾರ್ಯರ್ತರಿಂದ ವಿಜಯೋತ್ಸವ ನಡೆಯಿತು. ಧಾರವಾಡದ ಸುಭಾಶ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಚಂದ್ರಯಾನ 3 ಯಶಸ್ವಿ ಹಿನ್ನಲೆ ಬಿಜೆಪಿ ಕಾರ್ಯಕರ್ತರಿಂದ ಅಥಣಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆಯಿತು, ಇಸ್ರೋ ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಗೆ ಬಿಜೆಪಿ ಕಾರ್ಯಕರ್ತರ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿ ಲೈವ್ ಸ್ಕ್ರೀನ್ ನಲ್ಲಿ ವೀಕ್ಷಣೆ ಮಾಡಿ ನಂತರ ಮಾತನಾಡಿದರು. ಚಂದ್ರಯಾನ 3 ಯಶಸ್ವಿಯಾಗಿದೆ, ವಿಫಲ ಆದಾಗಲೂ ಆತ್ಮಸ್ಥೈರ್ಯ ಮುಂದುವರೆಸಿದ್ರು, ಕೋವಿಡ್ ಹೊತ್ತಲ್ಲೂ ವಿಜ್ಞಾನಿಗಳು ಬಹಳ ಶ್ರಮ ಪಟ್ಟಿದ್ದಾರೆ, ಭಾರತದ ಹೊಸ ಅಧ್ಯಾಯ ಆರಂಭವಾಗಿದೆ,ಇದು ವಿಶೇಷ ದಿನ, ವಿಜ್ಞಾನಿಗಳಿಗೆ ಪ್ರೇರಣೆಯಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಶುಭ ಕೋರಿದರು.
ಇದನ್ನೂ ಓದಿ : ‘ಸಿಟಿ ರವಿಗೆ ಮರ್ಯಾದೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ’
ನಿಗದಿತ ಸಮಯಕ್ಕೆ ಇಳಿದಿದೆ, ಇದು ದೇಶಕ್ಕೆ ಆನಂದ, ಇವತ್ತು ಸಂಭ್ರಮದ ದಿನ, ಜಗತ್ತಿನ ವಿಜ್ಞಾನದಲ್ಲಿ ಭಾರತ ನಂಬರ್ ವನ್ ಆಗಲಿದೆ, ಭಾರತದ ಜನರಿಗೆ ಆನಂದ ತರುವ ದಿನ,ಮೋದಿಯವರಿಗೆ ಅಭಿನಂದನೆಗಳು, ಭಾರತ ಇಂದು ಇಡೀ ಜಗತ್ತಿನಲ್ಲೇ ಗುರುತಿಸುವ ಕೆಲಸ ಮಾಡಿದೆ ಎಂದರು.
ಬಿಜೆಪಿ ಮುಖಂಡರು, ಕಾರ್ಯಕರ್ತರು ಚಂದ್ರಯಾನ 3 ಸಕ್ಸಸ್ ಬೆನ್ನಲ್ಲೇ ಮಂಗಳೂರಿನಲ್ಲಿ ಚೆಂಡೆ ಬಾರಿಸುವುದರ ಮೂಲಕ ಸಂಭ್ರಮ ಆಚರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.