ಬೆಂಗಳೂರು: ದೇಶದ ಹೆಸರಲ್ಲ ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ನಾನು ಮಾಡಿದ ಟ್ವೀಟ್‌ನಲ್ಲಿ ಏನೂ ತಪ್ಪಿಲ್ಲ, ಸಂವಿಧಾನವೇ ನನ್ನ ಧರ್ಮ ಅಂತ ಹೇಳಿದ್ದೇನೆ, ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಿಮ್ಮ ಆಚರಣೆ ವಿರುದ್ಧ ನಾನಿಲ್ಲ, ಅಂದ್ರೆ ನನ್ನ ಆಚರಣೆ ವಿರುದ್ಧ ಯಾಕೆ ಇದ್ದೀರ? ಮಾನವ ಕುಲ ಮುಂದುವರೆಯಬೇಕು ಅಂದರೆ ಕುತೂಹಲ ಮುಖ್ಯ. ಏನೇನು ಪ್ರಶ್ನೆ ಇದೆ, ಅದಕ್ಕೆ ಏನೇನು ಉತ್ತರ ಇದೆ ಕೊಡಿ ನೀವು. ನನಗೆ ಸಂವಿಧಾನದ ಬಗ್ಗೆ ನಂಬಿಕೆ ಇದೆ. ಎಫ್‌ಐಆರ್ ಎಲ್ಲಿಯಾದರೂ ಹಾಕಲಿ. ಸಂವಿಧಾನ ಗೌರವಿಸ್ತೀನಿ ಅಂದರೆ ಎಫ್‌ಐಆರ್ ಹಾಕ್ತೀನಿ ಅಂದ್ರೆ, ಹಾಕಲಿ ಬಿಡಿ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯ ಪೊಲೀಸ್ ಇಲಾಖೆ ಪರಿಶೀಲನಾ ಸಭೆ ಕರೆದ ಸಿಎಂ!
ಅವರ್ಯಾರು ಇತಿಹಾಸ ತಿಳಿದುಬಂದಿಲ್ಲ. ಭಾರತ, ಇಂಡಿಯಾ ಹೇಗೆ ಬಂತು ಹೇಳಲಿ. ವಾಟ್ಸಾಪ್ ವಿವಿಯಲ್ಲಿ ಬೆಳೆದು ಬಂದವರು ಇತಿಹಾಸ ತಿಳಿದುಕೊಂಡಿಲ್ಲ. ರಸ್ತೆ ಹೆಸರು ಬದಲಾಯಿಸುತ್ತಿದ್ದರು ಈಗ ದೇಶದ ಹೆಸರು ಬದಲಾಯಿಸ್ತಾ ಇದ್ದಾರೆ. ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ ಎಂದು ಸವಾಲು ಹಾಕಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.