Wednesday, May 31, 2023
spot_img
- Advertisement -spot_img

ಆರ್.ಆರ್.ನಗರ ಕ್ಷೇತ್ರದಿಂದ ನಟ ಚೇತನ್ ಚಂದ್ರ ಸ್ಪರ್ಧೆ

ಬೆಂಗಳೂರು: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ನಟರೊಬ್ಬರು ಎಂಟ್ರಿಯಾಗಲಿದ್ದಾರೆ ಅಂತಾ ಸುದ್ದಿ ಹರಿದಾಡುತ್ತಿದೆ. ಈ ನಟ ಹಾಲಿ ಶಾಸಕ ಮುನಿರತ್ನ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಕೇಳಿ ಬರ್ತಿದೆ , ನಟ ಚೇತನ್ ಚಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಈ ನಟ ಕಣಕ್ಕಿಳಿಯುವ ಸಾಧ್ಯತೆ ಇದೆ .

ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹೀಗೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ಚೇತನ್ ಚಂದ್ರ ಎಲೆಕ್ಷನ್‌ ಅಖಾಡಕ್ಕೆ ಧುಮುಕಲಿದ್ದಾರೆ. ಚೇತನ್ ಚಂದ್ರ ಅಭಿನಯದ ಇತ್ತೀಚಿನ ಚಿತ್ರ‌ ‘ಪ್ರಭುತ್ವ’ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇಂದಿನ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡೋ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಇದ್ರಲ್ಲಿ ಚೇತನ್ ಕ್ರಾಂತಿಕಾರಿ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಎಲೆಕ್ಷನ್‌ನಲ್ಲೇ ಸ್ಪರ್ಧೆ ಮಾಡಲಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಮುನಿರತ್ನ ಇವರ ವಿರುದ್ಧವೇ ನಟ ಚೇತನ್ ಚಂದ್ರ ಕಣ್ಣಕ್ಕಿಳಿಯಲು ನಿರ್ಧರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರಾ? ಇಲ್ಲಾ ಯಾವುದಾದರೂ ಪಕ್ಷದಿಂದ ಚುನಾವಣೆ ಧುಮುಕುತ್ತಾರಾ? ಅನ್ನೋದು ಸ್ಪಷ್ಟ ಆಗಬೇಕಿದೆ.

Related Articles

- Advertisement -

Latest Articles