ಬೆಂಗಳೂರು : ಇಂದು ಸಿಎಂ ದೆಹಲಿಗೆ ತೆರಳಲಿದ್ದು, ಚುನಾವಣೆ ಸಿದ್ಧತೆ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಮಾಡಲಿದ್ದಾರೆ. ಸಂಪುಟ ವಿಸ್ತರಣೆ, ಮೀಸಲಾತಿ ಹಾಗೂ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಸಿಎಂ ದೆಹಲಿ ಪ್ರವಾಸದ ಹಿಂದೆ ಇರುವ ಮುಖ್ಯ ಕಾರಣವೇ ಮೀಸಲಾತಿ ಎಂದು ಹೇಳಲಾಗಿದೆ.
ಪಂಚಮಸಾಲಿ ಮೀಸಲಾತಿ ವಿಚಾರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಿರುವ ಸಿಎಂ ಬೊಮ್ಮಾಯಿ ಚುನಾವಣೆ ಹೊತ್ತಿನಲ್ಲಿ ಸಿಎಂ ದೆಹಲಿ ಭೇಟಿ ಮೇಲೆ ಪಕ್ಷದ ಶಾಸಕರ ಕಣ್ಣಿಟ್ಟಿದ್ದು, ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ಸಚಿವ ಸ್ಥಾನದ ಮೇಲೆ ಒತ್ತಡ ಇದ್ದು, ಹೈಕಮಾಂಡ್ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಸಿಎಂ ಕೈಗೊಳ್ಳಲಿದ್ದಾರೆ.
ಇಂದು ಸಂಜೆ 4.30ರ ವೇಳೆಗೆ ದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ ಇಂದು ಅಲ್ಲೇ ವಾಸ್ತವ್ಯ ಹೂಡಿ ಹೈಕಮಾಂಡ್ ಭೇಟಿ ಮಾಡಿ ಸಚಿವ ಸಂಪುಟ ವಿಚಾರ, ಮೀಸಲಾತಿ ಬೇಡಿಕೆ ವಿಚಾರ ಸೇರಿ ಹಲವು ವಿಚಾರಗಳನ್ನ ಚರ್ಚಿಸಿ ನಾಳೆ ಮತ್ತೆ ದೆಹಲಿಯಿಂದ ಬೆಳಗಾವಿಗೆ ವಾಪಸ್ ಆಗಿ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳವಾರ ದೆಹಲಿಯಿಂದ ಸಿಎಂ ಬೊಮ್ಮಾಯಿ ವಾಪಸ್ ಆಗಲಿದ್ದಾರೆ. ಜೊತೆಗೆ 2023-24ನೇ ಸಾಲಿನ ಬಜೆಟ್ ಬಗ್ಗೆ ಕೇಂದ್ರದಿಂದ ಹೆಚ್ಚಿನ ಅನುದಾನ, ಯೋಜನೆಗಳ ಜೊತೆಗೆ ಮಹತ್ವದ ಯೋಜನೆಗಳ ಘೋಷಣೆ ಬಗ್ಗೆ ಚರ್ಚಿಸಲಿದ್ದಾರೆ.