ಬೆಂಗಳೂರು : ಚಂದಿರನ ಅಂಗಳದಲ್ಲಿ ಮೇಲ್ಮೈ ಅಧ್ಯಯನಕ್ಕೆಂದು ಕಾಲಿಟ್ಟ ಭಾರತದ ಚಂದ್ರಯಾನ-3ರ ಅಭೂತ ಪೂರ್ವ ಯಶಸ್ಸಿಗೆ ಕಾರಣವಾಗಿ, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿರುವ ಇಸ್ರೋ ಕಚೇರಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.
ನಗರದ ಪೀಣ್ಯ ಬಳಿ ಇರುವ ಇಸ್ರೋ ಕಂಮಾಂಡಿಂಗ್ ಸೆಂಟರ್‌ಗೆ ಬೆಳಿಗ್ಗೆ 10.30ಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಚಂದ್ರಯಾನ-3ರ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರನ್ನು ಅಭಿನಂದಿಸಲಿದ್ದಾರೆ.
ಇದನ್ನೂ ಓದಿ : ʼಇಸ್ರೋʼಗೆ ರಾಜ್ಯ ನಾಯಕರಿಂದ ಶುಭಾಶಯಗಳ ಮಹಾಪೂರ!
ಬಾಹ್ಯಾಕಾಶ ವಿಜ್ಞಾನ ಮತ್ತು ಅಂತರಿಕ್ಷ ಯಾನದಲ್ಲಿ ತನ್ನ ಸಾಧನೆ ಮೆರೆಯುವ ಮೂಲಕ ವಿಶ್ವದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತವು ದೈತ್ಯ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿರುವ, ಇಸ್ರೋ ಸಂಸ್ಥೆಗೆ ನಿನ್ನೆಯಷ್ಟೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿ ಸಂಸ್ಥೆಯ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.