ನವದೆಹಲಿ: ಗಡಿ ವಿಚಾರದಲ್ಲಿ ಭಾರತದೊಂದಿಗೆ ಸದಾ ಖ್ಯಾತೆ ತೆಗೆಯುವ ಚೀನಾ ಇದೀಗ ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶವೂ ಸೇರಿದಂತೆ ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಿರುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ.
ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್‌ನ 2023ರ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಮತ್ತು ಚೀನಾ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ‘ಸ್ಟ್ಯಾಂಡರ್ಡ್ ಮ್ಯಾಪ್’ ಸೇವೆಯ ವೆಬ್‌ಸೈಟ್ ಪ್ರಾರಂಭಿಸಿದ್ದು, ಈ ಮ್ಯಾಪ್‌ನಲ್ಲಿ ಭಾರತದ ಅಂಗವಾಗಿದ್ದ ಈ ಎಲ್ಲಾ ಪ್ರದೇಶವನ್ನು ಸೇರಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲು ಕಾಲಮಿತಿ ರೂಪಿಸಿ; ಸುಪ್ರೀಂ ಸೂಚನೆ
ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ರಾಷ್ಟ್ರೀಯ ಗಡಿಗಳ ರೇಖಾಚಿತ್ರ ವಿಧಾನವನ್ನು ಆಧರಿಸಿ ಈ ನಕ್ಷೆಯನ್ನು ಸಿದ್ಧಪಡಿಸಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಗ್ಲೋಬಲ್ ಟೈಮ್ಸ್ ಮಾಧ್ಯಮದ ವರದಿ ಪ್ರಕಾರ, ಚೀನಾ ಅಧಿಕೃತ ಮ್ಯಾಪ್ ಎಂದು ಘೋಷಿಸಿಕೊಂಡಿರುವ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶದ ಭಾಗ ಹಾಗೂ 1962ರ ಯುದ್ಧದಲ್ಲಿ ಆಕ್ರಮಿಸಿಕೊಂಡ ಅಕ್ಸಾಯ್ ಚಿನ್ ಅನ್ನು ತನ್ನ ಭಾಗವಾಗಿ ತೋರಿಸಿದೆ ಎಂದಿದೆ.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಅನಿಲ್ ಆಂಟನಿ ನೇಮಕ
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಮತ್ತು ಮುಂದೆಯೂ ಅವಿಭಾಜ್ಯ ಅಂಗವಾಗಿ ಉಳಿಯಲಿದೆ ಎಂದು ಹೇಳಿಕೊಳ್ಳುತ್ತಲೇ ಬಂದಿದೆ. ಆದರೆ ಚೀನಾ ಪದೇ ಪದೇ ಅರುಣಾಚಲ ಪ್ರದೇಶದ ಕೆಲ ಭಾಗದ ತನ್ನದೆಂದು ಘೋಷಿಸಿಕೊಳ್ಳುವುದು ಸೇರಿ ಗಡಿಯಲ್ಲಿ ಉದ್ಧಟತನ ಪ್ರದರ್ಶಿಸುತ್ತಲೇ ಇದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.