ಬೀಜಿಂಗ್ : ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸಂಪುಟದ ಸಚಿವರು ಒಬ್ಬರ ಹಿಂದೆ ಒಬ್ಬರಂತೆ ಕಣ್ಮರೆಯಾಗುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮತ್ತು ಮಾಜಿ ರಾಕೆಟ್ ಫೋರ್ಸ್ ಜನರಲ್ ನಾಪತ್ತೆಯಾಗಿದ್ದರು. ಇದೀಗ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಎರಡು ವಾರಗಳಿಂದ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗ್ತಿದೆ.
ಜಪಾನ್‌ನ ಯುಎಸ್ ರಾಯಭಾರಿ ರಹಮ್ ಇಮ್ಯಾನುಯೆಲ್ ಚೀನಾದ ರಾಜಕೀಯ ಅಸ್ಥಿರತೆಯ ಬಗ್ಗೆ ಟ್ವೀಟ್ ಮಾಡಿದ್ದು, ಚೀನಾ ರಕ್ಷಣಾ ಸಚಿವರು ಕಳೆದ ಎರಡು ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಚೀನಾ ಅಧ್ಯಕ್ಷರ ಸಚಿವ ಸಂಪುಟ ‘ಅಗಾಥಾ ಕ್ರಿಸ್ಟಿ’ ಅವರ ಕಾದಂಬರಿಯನ್ನು ಹೋಲುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಭಾರತ-ಸೌದಿ ನಡುವೆ ದ್ವಿಪಕ್ಷೀಯ ಮಾತುಕತೆ; ಹಲವು ಒಪ್ಪಂದಕ್ಕೆ ಸಹಿ
ರಕ್ಷಣಾ ಸಚಿವ ಲಿ ಶಾಂಗ್‌ಫು ಅವರು ಆಗಸ್ಟ್ 23ರಂದು ನಡೆದ ಮೂರನೇ ಚೀನಾ-ಆಫ್ರಿಕಾ ರಕ್ಷಣೆ ಮತ್ತು ಶಾಂತಿ ವೇದಿಕೆಯ ಸಭೆಯಲ್ಲಿ ಕೊನೆಯದಾಗಿ ಭಾಷಣ ಮಾಡಿದ್ದರು. ಆ ಬಳಿಕ ಅವರು ಕಾಣಿಸುತ್ತಿಲ್ಲ ಎನ್ನಲಾಗಿದೆ. ಮಾರ್ಚ್ 223ರಂದು ಲಿ ಶಾಂಗ್‌ಫು ಅವರನ್ನು ಚೀನಾದ ರಕ್ಷಣಾ ಸಚಿವರಾಗಿ ನೇಮಿಸಲಾಗಿದೆ. ಶಾಂಗ್‌ಫು ಅವರು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಜ್ಯ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.