ಬೆಂಗಳೂರು: ಕಾಂಗ್ರೆಸ್ ಭಯೋತ್ಪಾದಕರ ಪರವೋ ಅಥವಾ ದೇಶವನ್ನ ಉಳಿಸೋ ದೇಶಭಕ್ತರ ಪರವಾಗಿ ಇದ್ದಾರೋ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ವಿಜಯ್ ದಿವಸ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಸಿಎಂ ಗೌರವ ಸಲ್ಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.ದೇಶದ ನೈತಿಕತೆ ಕಡಿಮೆ ಮಾಡೋದು, ಪೊಲೀಸರ ನೈತಿಕತೆ ಕಡಿಮೆ ಮಾಡೋದು, ಹೀಗೆ ಮಾತಾಡೋದು ದೇಶಭಕ್ತನ ಕೆಲಸ ಅಲ್ಲ. ಕಾಂಗ್ರೆಸ್ ಪಕ್ಷ ತನ್ನ ನಿಲುವು ಸ್ಪಷ್ಟವಾಗಿ ಹೇಳಲಿ.
ಜನರು ಅವರ ಬಗ್ಗೆ ತೀರ್ಮಾನ ಮಾಡ್ತಾರೆ. ಒಂದು ಸಮುದಾಯವನ್ನ ಒಲೈಕೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಾಕ್ಷಿ ಸಮೇತ ಸಿಕ್ಕಾಗ ತನಿಖೆಯನ್ನ ಪ್ರಶ್ನೆ ಮಾಡೋದು, ಭಯೋತ್ಪಾದಕ ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ ಹಾಗೆ ಆಗುತ್ತೆ. ಕಾಂಗ್ರೆಸ್ ಈ ಬಗ್ಗೆ ತನ್ನ ನಿಲುವು ಹೇಳಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರ ಪ್ರಾರಂಭ ಆಗಿದ್ದೇ ಕಾಂಗ್ರೆಸ್‌ನಿಂದ. ಶಾರಿಕ್‌ಗೆ ಮಂಗಳೂರಿನಲ್ಲಿ ಬ್ಲಾಸ್ಟ್ ಮಾಡೋ ಉದ್ದೇಶ ಪಕ್ಕಾ ಇತ್ತು. ಅದಕ್ಕೆ ಎಲ್ಲಾ ತಯಾರಿ ಮಾಡಿದ್ರು. ಡಿ.ಕೆ.ಶಿವಕುಮಾರ್ ಆಕಸ್ಮಿಕ ಅಂತಾರೆ. ಇದು ಅವರಿಗೆ ಶೋಭೆ ತರೋದಿಲ್ಲ. ಚುನಾವಣೆಯ ತುಷ್ಠೀಕರಣದ ತಂತ್ರ ಇದು. ಇದು ಕಾಂಗ್ರೆಸ್‌ನ ಹಳೆಯ ತಂತ್ರ. ಈಗ ಇದೆಲ್ಲ ನಡೆಯೋದಿಲ್ಲ, ಭಯೋತ್ಪಾದಕ ಪ್ರಕರಣಗಳನ್ನು ಕ್ಷುಲ್ಲಕವಾಗಿ ನೋಡೋದು, ಅದಕ್ಕೆ ಬೆಂಬಲ ಕೊಡೋದು ಕಾಂಗ್ರೆಸ್ ಪ್ರವೃತ್ತಿ ಎಂದರು.