ಮೈಸೂರು : ನಾನು ಈ ಕಾರ್ಯಕ್ರಮಕ್ಕೆ ವಿಷ್ಣುವರ್ಧನ್ ಅಭಿಮಾನಿಯಾಗಿ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನಲ್ಲಿ ವಿಷ್ಣುವರ್ಧನ್ರ ಸ್ಮಾರಕವನ್ನು ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿ , ಇದು ವಿಷ್ಣು ಅಭಿಮಾನಿಗಳ ಪಾಲಿಗೆ ವಿಶೇಷ ದಿನ. 11 ಕೋಟಿ ರೂಪಾಯಿಯಲ್ಲಿ ಭವ್ಯವಾದ ಸ್ಮಾರಕ ನಿರ್ಮಾಣ ಆಗಿದೆ ಎಂದು ಸಂತಸಪಟ್ಟರು. ಯಾವ ಪಾತ್ರವನ್ನು ಕೊಟ್ಟರೂ ವಿಷ್ಣುವರ್ಧನ್ ಅತ್ಯಂತ ನೈಜವಾಗಿ ಅಭಿನಯಿಸುತ್ತಿದ್ದರು. ಅವರು ಮಾಡಿದ ಪ್ರತಿ ಪಾತ್ರ ಇಂದಿಗೂ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ ಎಂದು ಕೊಂಡಾಡಿದರು.
ಕರ್ನಾಟಕದಲ್ಲಿ ಸಾಹಸ ಸಿಂಹನಾಗಿ ಮೆರೆದ ವಿಷ್ಣುವರ್ಧನ್ ಕಲೆ, ಸಾಹಸ, ಸಾಧನೆ ಎಲ್ಲವೂ ನಮ್ಮ ಕಣ್ಣ ಮುಂದಿದೆ, ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿ, ಕರುನಾಡಿನ ಧ್ವಜವನ್ನು ಎತ್ತಿ ಹಿಡಿದರು.
ಸಾಹಸ ಸಿಂಹ’ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಿಗಬೇಕು ಎಂಬುದು ಫ್ಯಾನ್ಸ್ ಬಯಕೆಯಾಗಿದ್ದು, ವಿಷ್ಣು ಅಭಿಮಾನಿಗಳ ಮನದಾಳದ ಮಾತು ಮತ್ತು ಭಾವನೆಗಳಿಗೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ’ ಎಂದು ಹೇಳಿದ್ದಾರೆ.