Wednesday, March 22, 2023
spot_img
- Advertisement -spot_img

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರಿಯಾದ ಹೆಜ್ಜೆ ಇಡಬೇಕು : ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ/ಹರಿಹರ : ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರಿಯಾದ ಹೆಜ್ಜೆ ಇಡಬೇಕು. ತರಾತುರಿಯಲ್ಲಿ ಮೀಸಲಾತಿ ನೀಡಿದರೆ, ಅದು ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಮಾಧ್ಯಮದವರೊಂದಿಗೆ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಗುರಿ ನಾನು ತಲುಪುತ್ತೇನೆ. ಮೀಸಲಾತಿ ಬಗ್ಗೆ ನ್ಯಾಯಾಲಯ ಪೂರ್ಣ ತಡೆಯಾಜ್ಞೆ ನೀಡಿಲ್ಲ. ಮುಂದಿನ ದಿನಾಂಕದಲ್ಲಿ ಸಂಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ ಮೀಸಲಾತಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು.

ನಮ್ಮ ಬಗ್ಗೆ ಅನೇಕರು ಟೀಕೆ ಮಾಡುತ್ತಾರೆ. ಅಂಥವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಕೆಲಸಗಳು ಅಂಥವರಿಗೆ ಉತ್ತರ ಕೊಡುತ್ತವೆ. ನಾನು ಯಾರೊಬ್ಬರ ಪರವಾಗಿಯೂ ಇಲ್ಲ. ನಾನು ಸಮಾಜದ ಪರ, ಪಂಚಮಸಾಲಿ ಸಮಾಜದ ಬಹು ವರ್ಷಗಳ ಬೇಡಿಕೆಯಾದ ಮೀಸಲಾತಿ ಕಲ್ಪಿಸಲು ನಾನು ಬದ್ಧ ಎಂದು ಪುನರುಚ್ಛರಿಸಿದರು.

ಪಂಚಮಸಾಲಿ ಮಠ ಅರ್ಧಕ್ಕೆ ನಿಂತು ಹೋಗಿದ್ದು, ಮಠಕ್ಕೆ ಭಕ್ತರು ಬಂದಾಗ ಅನ್ನ ಇಲ್ಲದೆ ವಾಪಸಾಗುತ್ತಿದ್ದರು. ಇದನ್ನು ಗಮನಿಸಿ, ಮಠದ ಅಭಿವೃದ್ಧಿಗೆ ಅನುದಾನ ನೀಡಲಾಯಿತು. ಅದೇ ರೀತಿ ಕನಕ ಮಠ, ವಾಲ್ಮೀಕಿ ಮಠ, ವೇಮನ ಮಠಗಳಿಗೂ ಸಮಾನವಾಗಿ ಅನುದಾನ ನೀಡಿದ್ದೇವೆ ಎಂದು ಹೇಳಿದರು.

Related Articles

- Advertisement -

Latest Articles