ಮೈಸೂರು: ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತವಾಗಿದ್ದು, ಹೀಗಾಗಿ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನಾವು ಸುಮ್ಮನೇ ಕುಳಿತಿದ್ದರೂ ಸಹ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಕಾರ್ಯಕ್ರಮ ಇದೆ. ಅದಕ್ಕಾಗಿ ಅವರು ಆ ರೀತಿ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಗುಜರಾತ್ ಚುನಾವಣೆ ನಂತರ ಸಹಜವಾಗಿಯೇ ಕರ್ನಾಟಕದಲ್ಲಿ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ನಾವು ಸಂಘಟನೆ ದೃಷ್ಟಿಯಿಂದ ಎಲ್ಲಾ ತಯಾರಿ ನಡೆಸುತ್ತಿದ್ದೇವೆ. ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಅದಕ್ಕಾಗಿ ಎಲ್ಲಾ ತಯಾರಿ ನಡೆಸಿದ್ದೇವೆ. ಅವಧಿಗೆ ಮುನ್ನ ಚುನಾವಣೆ ಪ್ರಶ್ನೆಗೆ ಇಂತಹವೆಲ್ಲಾ ನಿಮಗೆ ಯಾರು ಹೇಳುತ್ತಾರೆ ಎಂದು ಗರಂ ಆಗಿ ಉತ್ತರಿಸಿದ್ದಾರೆ.
ಗುಜರಾತ್ ಚುನಾವಣೆ ಫಲಿತಾಂಶ ಮುಂಬರುವ ಕರ್ನಾಟಕದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿ ನಾವು ಸುಮ್ಮನಿದ್ರೂ ಗೆಲ್ಲುತ್ತೇವೆ. ನಾವು ಯಾವ ತಂತ್ರಗಾರಿಕೆ ಮಾಡುವ ಅವಶ್ಯಕತೆಯೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿದೆ. ಗುಜರಾತ್‌ನಲ್ಲಿ ಹಣದ ಹೊಳೆ ಹರಿಸಿ ಆಪ್‌ನವರು ಚುನಾವಣೆ ಎದುರಿಸಿದ್ದರು.
ಇದರಿಂದ ಕಾಂಗ್ರೆಸ್ ಗುಜರಾತ್‌ನಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಜೆಡಿಎಸ್ ಹೊಸ ಪಕ್ಷವಲ್ಲ, ಹಲವಾರು ಬಾರಿ ಚುನಾವಣೆ ಎದುರಿಸಿದ್ದಾರೆ. ಆಪ್‌ನವರು ಸ್ಪರ್ಧೆ ಮಾಡಿ ಕಾಂಗ್ರೆಸ್‌ನ ಮತ ತಿಂದರು. ಆಪ್ ಪಡೆದ ಮತಗಳೆಲ್ಲ ಕಾಂಗ್ರೆಸ್‌ನದ್ದು ಎಂದರು.