Wednesday, May 31, 2023
spot_img
- Advertisement -spot_img

ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುವ ವಿಶ್ವಾಸ ಇದೆ : ಸಿಎಂ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಎಕ್ಸಿಟ್ ಪೋಲ್ ಬಗ್ಗೆ ತಲೆಕೆಡಿಸಿ ಕೊಳ್ಳು ವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಎಕ್ಸಿಟ್ ಪೋಲ್​ಗಳು ಶೇ 100ರಷ್ಟು ಸರಿಯಾಗಿ ಇರುವುದಿಲ್ಲ, ಮತಗಟ್ಟೆ ಸಮೀಕ್ಷೆಗಳು ಪೂರ್ಣವಾಗಿ ಸರಿಯಾಗಿರುತ್ತೆ ಅಂತಾ ಹೇಳಕ್ಕಾಗಲ್ಲ, ನಿಜವಾದ ಫಲಿತಾಶ ಬರುವಾಗ ಪ್ಲಸ್ ಇರುವುದು ಮೈನಸ್, ಮೈನಸ್ ಇರುವುದು ಪ್ಲಸ್ ಆಗುತ್ತದೆ ಎಂದರು.

ನಾವೇ ಕಿಂಗ್ ಆಗ್ತೇವೆ. ಜೆಡಿಎಸ್ ಕಿಂಗ್ ಮೇಕರ್ ಆಗುವುದಿಲ್ಲ. ಬಿಜೆಪಿಗೆ ಸಂಪುರ್ಣ ಬಹುಮತ ಸಿಗುವ ವಿಶ್ವಾಸ ಇದೆ, ಬಿಜೆಪಿಗೆ ಬಹುಮತ ಸಿಗುತ್ತದೆ. ಮೇ 13 ರ ಫಲಿತಾಂಶ ಬರುವ ತನಕ ಕಾದು ನೋಡಿ ಎಂದು ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕನೆ ಬಾರಿ ಆಯ್ಕೆ ಮಾಡಲು ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದರು ಜೊತೆಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

Related Articles

- Advertisement -

Latest Articles