ಬೆಂಗಳೂರು : ಮುಖ್ಯಮಂತ್ರಿ ಮಾಡುವವರು ಜನ. ಆದರೆ, ಜನರ ಮನಸ್ಸಿನಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರು ಇಲ್ಲ. ಫಲಿತಾಂಶ ಬಂದ ಮೇಲೆ ಜನರ ನಾಡಿಮಿಡಿತ ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಇಲ್ಲ. ಹೀಗಿದ್ದಾಗ ಇಲ್ಲದಿರುವ ಸಿಎಂ ಸೀಟಿಗಾಗಿ ಗುದ್ದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ, ಮುಖ್ಯಮಂತ್ರಿಗಾಗಿ ಹೋರಾಡುತ್ತಿದೆ. ಜನರಿಗೆ ಕರ್ನಾಟಕಕ್ಕೆ ಒಳ್ಳೆಯದು ಮಾಡಬೇಕು ಎಂದು ಅವರೇನು ಮಾಡಿಲ್ಲ. ಸಿದ್ದರಾಯಮಯ್ಯ ಹೇಳಿರುವುದು ಅಲ್ಲಿ ಅಂತರಿಕವಾಗಿ ನಡೆಯುವ ಪ್ರತಿಬಿಂಬ ಎಂದು ಹೇಳಿದರು.
ಡಿಕೆ ಶಿವಕುಮಾರ್ ಹೋದ ಕಡೆಯಲ್ಲಾ ನಾನೇ ಸಿಎಂ ನನಗೆ ಆಶಿರ್ವಾದ ಮಾಡಿ ಅಂತ ಹೇಳಿಕೊಂಡು ತಿರುಗಾಡ್ತಾರೆ. ಸಿದ್ದರಾಮಯ್ಯ ನಾನೇ ಸಿಎಂ ಅಂತಾ ಹೇಳ್ತಾರೆ. ಮುಖ್ಯಮಂತ್ರಿ ಮಾಡೋರು ಜನ. ಆದ್ರೆ, ಜನರ ಮನಸ್ಸಿನಲ್ಲಿ ಇವರಿಬ್ಬರು ಇಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಕನಸಿನಲ್ಲಿ ಮುಖ್ಯಮಂತ್ರಿ ಸೀಟಿನ ಕನಸು ಕಾಣ್ತಿದ್ದಾರೆ. ಆ ಕನಸು ನನಸಾಗುವುದಿಲ್ಲ ಎಂದರು.