ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿ ಪ್ರವಾಸ ರದ್ದು ಮಾಡಿದ್ದಾರೆ. ನಾಳೆ ತಾವು ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಬೇಕಿತ್ತು. ಆದರೆ ಸಂಪುಟ ಸಭೆ ಹಿನ್ನೆಲೆ ಪ್ರವಾಸ ರದ್ದಾಗಿದೆ.
ಸರ್ಕಾರದ ಕೊನೆ ಸಂಪುಟ ಸಭೆ ಸಾಧ್ಯತೆ ಹಿನ್ನೆಲೆ ಹಾವೇರಿಯಲ್ಲಿ ನಾಳೆ ಶಿಗ್ಗಾಂವಿ ಪ್ರವಾಸ ರದ್ದು ಮಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ನಾಳಿನ ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಎನ್ನಲಾಗುತ್ತಿದೆ. ಇನ್ನೂ ಬಸವರಾಜ ಬೊಮ್ಮಾಯಿ ಸಿಎಂ ಬಸವರಾಜ ಬೊಮ್ಮಾಯಿ ಚುನಾವಣೆ ಹತ್ತರವಾಗ್ತಿದ್ದಂತೆ ರ್ಯಾಲಿ, ಯಾತ್ರೆಗಳ ಜತೆಗೆ ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಗೆಲುವು ಸುಲಭಗೊಳಿಸಲು ಮಾಸ್ಟರ್‌ಪ್ಲಾನ್ ರೂಪಿಸುತ್ತಿದ್ದಾರೆ.
ರಾಜ್ಯಾದ್ಯಂತ ಪ್ರಚಾರದಲ್ಲಿ ಬ್ಯುಸಿಯಾಗಿದ್ರೂ, ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರಕ್ಕೆ ತೊಂದರೆಯಾಗದಂತೆ ರಣತಂತ್ರ ರೂಪಿಸುತ್ತಿದ್ದಾರೆ. ತಮ್ಮ ಪರಮಾಪ್ತರಿಗೆ ನಿಗಮ ಮಂಡಳಿಯಲ್ಲಿ 40ಕ್ಕೂ ಹೆಚ್ಚು ಸ್ಥಾನ ನೀಡಿದ್ದಾರೆ. ಇನ್ನೂ ಶಿಗ್ಗಾಂವಿಯಲ್ಲಿ ಶಿಗ್ಗಾಂವಿಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಹೆಚ್ಚಿವೆ. ಹೀಗಾಗಿ ಕಾಂಗ್ರೆಸ್ ಪಂಚಮಸಾಲಿ ಸಮುದಾಯದ ನಾಯಕ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಪ್ಲಾನ್ ಮಾಡಿದೆ.
ನಾನು ಯಾವುದೇ ಕಾರಣಕ್ಕೂ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಡೆ ಹೋಗುವುದಿಲ್ಲ. ನಾನು ಕ್ಷೇತ್ರ ಬಿಡುತ್ತೇನೆ ಅಂತ ಯಾರು ಹೇಳಿದ್ದರು ಎಂದು ಇತ್ತೀಚೆಗೆ ಹೇಳಿದ್ದರು. ಆ ಮೂಲಕ ಸಿಎಂ ಬೊಮ್ಮಾಯಿ ಬೇರೆ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದರು.ವಿನಯ್ ಕುಲಕರ್ಣಿ ಹೆಸರು ಹೇಳಿದ್ದಂತೆ ಬರುತ್ತಿದ್ದಂತೆಯೇ ಶಿಗ್ಗಾಂವಿಯಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ.