ಬೆಂಗಳೂರು : ಸಿದ್ದರಾಮಯ್ಯನವ್ರು ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ ಎಂದು ಸಿ.ಎಂ ಇಬ್ರಾಹಿಂ ಕಿಡಿ ಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ,ನಾವು ಯಾವುದೇ ಸರ್ವೇ ಮಾಡಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ನವರು ಎಸಿ ಬಸ್‌ನಲ್ಲಿ ಪ್ರವಾಸ ಮಾಡ್ತಿದ್ದಾರೆ. ಹೋದ ಜಿಲ್ಲೆಯಲ್ಲಿ ಚಿಕನ್ ತಿಂದು ವಾಪಸ್ ಆಗ್ತಿದ್ದಾರೆ, ಅನ್ಯರ ಡೊಂಕು ನಿಮಗ್ಯಾಕೆ,ನಿಮ್ಮ ಡೊಂಕು ತಿದ್ದಿಕೊಳ್ಳಿ ಎಂದು ಬಸವಣ್ಣ ಹೇಳಿದ್ದಾರೆ. ಜೆಡಿಎಸ್‌ಗೆ 80 ಸೀಟು ಬರುತ್ತೆ ಅಂತ ಸರ್ವೇ ಹೇಳುತ್ತಿದೆ ಎಂದು ಹೇಳಿದರು.
ಕುಮಾರಸ್ವಾಮಿ ಯಾತ್ರೆಗೆ ಜನರ ಬೆಂಬಲ ಸಿಗುತ್ತಿದೆ. ನಮ್ಮ ಯಾತ್ರೆಯಲ್ಲಿ ಯಾರನ್ನೂ ಬೈಯ್ಯುವ ಚಿಂತೆಯಿಲ್ಲ. ನಾಡಿನ ಜನರ ಚಿಂತೆ ನಮಗಿದೆ, ಜನರ ಸಹಕಾರ ಏನಿದೆ ಅಂತ ಟಿವಿಯಲ್ಲಿ ನೋಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮಕ್ಕೂ ನಮಗೂ ಏನು ವ್ಯತ್ಯಾಸವಿದೆ ಅಂತ ಜನ ನೋಡ್ತಿದ್ದಾರೆ. ನಿರುದ್ಯೋಗಿ ರಾಜಕಾರಣಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ನಮಗೆ ಬಹುಮತ ಬರಲಿದೆ ಎಂದೂ ಜೆಡಿಎಸ್ ರಾಜ್ಯಾಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಳೀನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿ, ಕಟೀಲ್‌ರವರೆ ನಿಮ್ಮ ಪಿಟೀಲನ್ನು ಬಿಜೆಪಿ ಕಚೇರಿಯಲ್ಲಿ ನುಡಿಸಿ, ಹೊರಗೆ ಬಂದು ಪಿಟೀಲು ನುಡಿಸಿದ್ರೆ ಪಿಟೀಲು ಸಮೇತ ಜನ ನಿಮ್ಮನ್ನು ಹೊರ ಹಾಕ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ದ ಸಿ.ಎಂ ಇಬ್ರಾಹಿಂ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ನೋಡುದ್ರೆ ಅಯ್ಯೋ ಅನ್ಸುತ್ತೆ, ಸಿದ್ದರಾಮಯ್ಯ ಬೆಳ್ಸಿದ್ದು ನಾವೇ. ಗಣೇಶ್ ಬೀಡಿ, ಬೇರೆ ಬೀಡಿ ತರಹ ಸಿದ್ದರಾಮಯ್ಯ ಬೀಡಿ ಬರುತ್ತೇನೋ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡ್ತಾರಾ ಅಂತ ನೀವೆ ಇನ್ನೊಮ್ಮೆ ಪ್ರಶ್ನೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.