ಬೆಂಗಳೂರು: ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗಲಿದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಮಾಧ್ಯ ಮದವರೊಂದಿಗೆ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಬಳಿ ದುಡ್ಡು ಇದೆ, ನಮ್ಮ ಬಳಿ ಏನೂ ಇಲ್ಲ. ಹಣ ಇರುವುದರಿಂದ ಎರಡೂ ಪಕ್ಷಗಳು ಸರ್ವೆ ಮಾಡಿಸಿಕೊಂಡಿವೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸ ರಾಷ್ಟ್ರೀಯ ಪಕ್ಷಗಳು ಮಾಡಿವೆ ಎಂದು ತಿಳಿಸಿದರು.
ಜೆಡಿಎಸ್ ಯಾವುದಕ್ಕೂ ಹಿಗ್ಗುವುದಿಲ್ಲ, ಕುಗ್ಗುವುದೂ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತೆ. ಈ ಚುನಾವಣೆ ದುಡ್ಡಿನಲ್ಲಿ ನಡೆದಿದೆ. ನಮ್ಮ ಅಭ್ಯರ್ಥಿಗಳು ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ ಎಂದರು. ನಮಗೆ ಮ್ಯಾಜಿಕ್ ನಂಬರ್ ದಾಟುವ ವಿಶ್ವಾಸವಿದೆ. ಮೈತ್ರಿ ಸರ್ಕಾರ ರಚಿಸುವ ಪ್ರಶ್ನೆಯೇ ಉದ್ಭವಿಸಲ್ಲ. ಕೇಂದ್ರ ನಾಯಕರಿಗೆ ನಾನೇ ವಾಸ್ತವ ಸ್ಥಿತಿಯನ್ನು ತಿಳಿಸಿದ್ದೇನೆ. ಕೇಂದ್ರ ನಾಯಕರಿಗೂ ಬಹುಮತ ಬರುವ ವಿಶ್ವಾಸ ಇದೆ ಎಂದರು.
ಇನ್ನೂ ಸಮ್ಮಿಶ್ರ ಸರ್ಕಾರದ ಬಗ್ಗೆ ನಾವು ಏನನ್ನೂ ನಿರ್ಧರಿಸಿಲ್ಲ, ಫಲಿತಾಂಶಕ್ಕಾಗಿ ಕಾಯುತ್ತೇವೆ. ಆ ಬಳಿಕವೇ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.