ಚಿಕ್ಕಮಗಳೂರು: ಬೊಮ್ಮಣ್ಣ ಕೆ.ಎಂ.ಎಫ್ ನ್ನು ಅಮೂಲ್ ಗೆ ಸೇರಿಸಲು ಹೊರಟಿದ್ದೀರಾ, ಇದರಿಂದ ಹಾಲಿನ ಕ್ರಾಂತಿ ಆಗಲ್ಲ, ರಕ್ತ ಕ್ರಾಂತಿ ಮಾಡಬೇಕಾಗುತ್ತೆ ಎಂದು ಸಿಎಂ ಇಬ್ರಾಹಿಂ ಆಕ್ರೋಶ ಹೊರಹಾಕಿದ್ದಾರೆ.
ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ನಮ್ಮೂರಲ್ಲಿ ಪಾನಿಪುರಿ ಮಾರೋನು ಗುಜರಾತ್ ಅವನೇ ಎಂದು ಮೋದಿ ವಿರುದ್ಧ ವ್ಯಂಗ್ಯ ಮಾಡಿದ್ದಾರೆ. ನಿಮ್ಮ ಭಾಗ ನಮಗೆ ಬೇಕಾಗಿಲ್ಲ, ಕನ್ನಡಿಗರು ಕೊಡುವವರು, ಬೇಡೋರಲ್ಲ, ನಿಮ್ಮ ಯೋಚನೆಯನ್ನ ಕೈಬಿಡಿ ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ ಎಂದರು.
ಇನ್ನೂ ಕಾಂಗ್ರೆಸ್ ನವರ ಪ್ರಣಾಳಿಕೆ ಬಗ್ಗೆ ಮಾತನಾಡಿ, ಕಾಂಗ್ರೆಸ್ ಯೋಜನೆಯಿಂದ ಮನೆಯಲ್ಲಿ ಜಗಳ ಆಗುತ್ತೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ 2 ಸಾವಿರ ಯಾರಿಗೆ ಕೊಡ್ತೀಯಾ ? ಅತ್ತೆ ನಾನು ಮನೆ ಯಜಮಾನಿ ಅಂತ, ಸೊಸೆ ನಾನು ನಿನ್ನ ಮಗನ ಹೆಂಡತಿ ಅಂತ. ಅತ್ತೆ-ಸೊಸೆ ಜಗಳ ಶುರುವಾಗುತ್ತೆ. ಕಾಂಗ್ರೆಸ್ 2 ಸಾವಿರ ನೀಡಿ ಮನೆ-ಮನೆಗಳಲ್ಲಿ ಜಗಳ ಮಾಡಿಸಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.