ಬೆಂಗಳೂರು: ಸೆ.15ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆ ಕರೆಯಲಾಗಿದೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪೊಲೀಸ್ ಕಮೀಷನರ್‌ಗಳು, ವಲಯ ಐಜಿಪಿಗಳು, ಡಿಐಜಿಪಿಗಳು, ಎಸ್‌ಪಿಗಳಿಗೆ ಭಾಗಿಯಾಗಲು ಸೂಚಿಸಲಾಗಿದೆ.
ಮುಖ್ಯಮಂತ್ರಿ ಸಭೆಗೆ ಅಗತ್ಯ ಸಿದ್ದತೆಗಳೊಂದಿಗೆ ಆಗಮಿಸಲು ಡಿಜಿಪಿ ಸೂಚನೆ ನೀಡಿದ್ದು, ತಮ್ಮ ಕಮೀಷನರೇಟ್ ಹಾಗೂ ಜಿಲ್ಲೆಗಳ ಪ್ರಮುಖ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ಹಂಚಿಕೊಳ್ಳುವಂತೆಯೂ ಸೂಚಿಸಲಾಗಿದೆ. ಸಭೆಯಲ್ಲಿ ಇಲಾಖೆಗೆ ಅಗತ್ಯವಾಗಿರುವ ಹೊಸ ಕಾರ್ಯ ಯೋಜನೆ, ಅಹವಾಲುಗಳ ಜೊತೆ ಆಗಮಿಸುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: ‘ಬೆಳಗ್ಗೆ ಎದ್ದಾಗ ಲಕ್ಷ್ಮಿ ಶ್ಲೋಕ, ಮಲಗುವಾಗ ಹನುಮನ ಶ್ಲೋಕ ಹೇಳ್ತೀನಿ’
ಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸೇರಿ ಹಲವು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಕ್ಯಾಬಿನೆಟ್ ಸಭೆ
ರಾಜ್ಯದ ಬರ ತಾಲೂಕುಗಳ ಹೆಸರು ಇಂದು ಘೋಷಣೆ ಮಾಡುವ ಸಾಧ್ಯತೆ ಇದೆ. ಮಧ್ಯಾಹ್ನ ಕ್ಯಾಬಿನೆಟ್ ಸಭೆ ಕರೆಯಲಾಗಿದ್ದು, ಸಭೆ ಬಳಿಕ ಬರ ತಾಲೂಕುಗಳ ಘೋಷಣೆ ಮಾಡುವ ಸಂಭವವಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಹತ್ವದ ಕ್ಯಾಬಿನೆಟ್ ಸಭೆ; ಬರಪೀಡಿತ ತಾಲೂಕುಗಳ ಘೋಷಣೆ ಸಾಧ್ಯತೆ
ರಾಜ್ಯದ 113 ತಾಲೂಕುಗಳಲ್ಲಿ ಬರವಿದ್ದು, ಇದರಲ್ಲಿ 62 ತಾಲೂಕುಗಳಲ್ಲಿ ಸಂಪೂರ್ಣ ಬರ ಎಂದು ವರದಿ ನೀಡಲಾಗಿದೆ. ಕೇಂದ್ರದ ಮಾನದಂಡದ ಪ್ರಕಾರವೇ ಹಲವು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಬರಪೀಡಿತ ತಾಲೂಕುಗಳಿಗೆ ನೀಡಬೇಕಾದ ಅನುದಾನ, ನೆರವು ಸಂಬಂಧ ಚರ್ಚೆ ನಡೆಯಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.