ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಎರಡು ದಿನ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಹಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಶುಕ್ರವಾರ ಮತ್ತು ಶನಿವಾರ ಎರಡು ದಿನ ತಮ್ಮ ತವರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ 12.55ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಅಲ್ಲಿಂದ ಮಧ್ನಾಹ್ನ 2 ಗಂಟೆಗೆ ರಸ್ತೆಯ ಮೂಲಕ ನಂಜನಗೂಡಿಗೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ರೈತರ ಸಂಕಷ್ಟದ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವೆ: ಬಂಡೆಪ್ಪ ಖಾಶೆಂಪೂರ್
ನಂತರ 2.30ಕ್ಕೆ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ಉದ್ಘಾಟಿಸಲಿದ್ದಾರೆ. ಬಳಿಕ 3 ಗಂಟೆಗೆ ಕಳಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಡೇಮಾಲಮ್ಮ ದೇವಸ್ಥಾನ ಲೋಕಾರ್ಪಣೆಗೊಳಿಸುತ್ತಾರೆ. ಬಳಿಕ ಮೈಸೂರಿಗೆ ವಾಪಸ್ ಆಗಲಿದ್ದಾರೆ. ಶನಿವಾರ ದಿವಂಗತ ಪ.ಮಲ್ಲೇಶ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾಗಲಿರುವ ಅವರು, ಮಧ್ಯಾಹ್ನ ಅಡಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡುತ್ತಾರೆ.
ಇದನ್ನೂ ಓದಿ: ಬಿಜೆಪಿಗೆ ಮಾಜಿ ಸಂಸದೆ ವಿಜಯಶಾಂತಿ ರಾಜೀನಾಮೆ: ಮರಳಿ ಕಾಂಗ್ರೆಸ್ ಸೇರ್ಪಡೆ ಸಂಭವ!
ಅಲ್ಲಿ ನಡೆಯಲಿರುವ ಸಮಾರಂಭಲ್ಲಿ ಭಾಗಿಯಾಗುತ್ತಾರೆ. ಸಂಜೆ 4 ಗಂಟೆಗೆ ಎಸ್‌ವಿಇಐ ವಿದ್ಯಾಸಂಸ್ಥೆಯ ರಜತ ಮಹೋತ್ಸವ ನೆರವೇರಿಸಲಿದ್ದು, ರಾತ್ರಿ 7 ಗಂಟೆ ರಸ್ತೆ ಮೂಲಕ ಮದ್ದೂರು ತಾಲ್ಲೂಕಿನ ಶಿವಪುರ ಗ್ರಾಮಕ್ಕೆ ತೆರಳಲಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ರೈತರನ್ನು ಬಂಧಿಸಿದ ಪೊಲೀಸರು
ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸದ ಹಿನ್ನೆಲೆ ಸಿಎಂ ಕಾರ್ಯಕ್ರಮಗಳಿಗೆ ರೈತರಿಂದ ಅಡ್ಡಿ ಮಾಡುವ ಸಂಭವವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರೈತರ ಬಂಧನ ಮಾಡಲಾಗಿದೆ. ಮುಂಜಾನೆ 3 ಗಂಟೆಗೆ ಕೆಲ ರೈತ ಮುಖಂಡರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ವಾರ ಮೈಸೂರಿನ ಸಿಎಂ ನಿವಾಸದ ಬಳಿ ಪ್ರತಿಭಟನಾ ಧರಣಿ ಮಾಡಲು ರೈತರು ಬಂದಿದ್ದರು. ರೈತರನ್ನು ಪ್ರತಿಭಟನೆ ಮಾಡಲು ಬಿಡದೆ ಏಕಾಏಕಿ ಪೋಲಿಸರು ಬಂಧಿಸಿದ್ದಾರೆ. ಪೋಲಿಸರ ನಡೆಯನ್ನು ಖಂಡಿಸಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಗಳಿಗೆ ರೈತರ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಹಲವು ರೈತರನ್ನು ಬಂಧಿಸಲಾಗಿದೆ.
ಹತ್ತಳ್ಳಿ ದೇವರಾಜು,ಬರಡನಪುರ ನಾಗರಾಜು,ಭಾಗ್ಯರಾಜು ಸೇರಿ ಹಲವಾರು ರೈತರನ್ನು ಬಂಧಿಸಲಾಗಿದೆ. ಪೊಲೀಸರ ನಡೆ ಖಂಡಿಸಿ ಬನ್ನೂರು ಪೋಲಿಸ್ ಠಾಣೆ ಮುಂಭಾಗ ಬೆಳ್ಳಂ ಬೆಳಗ್ಗೆ ರೈತರು ಪ್ರತಿಭಟನೆಗಿಳಿದಿದ್ದು, ಈ ಕೂಡಲೇ ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ ಜೊತೆಗೆ ನಮಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.