ಬೆಂಗಳೂರು: ನಾನು ನನ್ನ ಅಂಕಲ್ ಸಿಎಂ ಬೊಮ್ಮಾಯಿಯವರಿಗೆ ಸಪೋರ್ಟ್ ಮಾಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ನನಗೆ ಚಿಕ್ಕಂದಿನಿಂದಲೂ ಬೊಮ್ಮಾಯಿಯವರು ಪರಿಚಯ , ಹೀಗಾಗಿ ಅವರನ್ನು ಬೆಂಬಲಿಸುತ್ತೇನೆ, ಕಷ್ಟದ ಸಮಯದಲ್ಲಿಯೂ ನನಗೆ ನೆರವಾಗಿದ್ದರು, ನನ್ನ ಜೀವನದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದಾರೆ , ಬೊಮ್ಮಾಯಿ ವ್ಯಕ್ತಿತ್ವಕ್ಕೆ ನಾನುಬೆಲೆ ಕೊಡ್ತೀನಿ ಎಂದು ತಿಳಿಸಿದರು.
ಬೊಮ್ಮಾಯಿಯವರು ಎಲ್ಲಾದ್ರೂ ಬೇರೆ ಪಕ್ಷದಲ್ಲಿದ್ದರೂ ನಾನು ಅವರಿಗೆ ಸಪೋರ್ಟ್ ಮಾಡ್ತಿದ್ದೆ , ಈ ವ್ಯಕ್ತಿ ನನಗೆ ಬೇಕಾಗಿದ್ದಾರೆ, ಹಣಕ್ಕಾಗಿ ಚುನಾವಣಾ ಪ್ರಚಾರ ಮಾಡ್ತಿಲ್ಲ, ನಾನು ಚುನಾವಣೆಗೆ ನಿಲ್ಲೋದಿಲ್ಲ, ಚಾನ್ಸೇ ಇಲ್ಲ, ಅನಿವಾರ್ಯ ಕಾರಣಗಳಿಗೆ ನಿಲ್ಲೋ ಅಭ್ಯರ್ಥಿ ನಾನಲ್ಲ , ನಾನು ನಿಲ್ಲಬೇಕು ಅಂತಿದ್ರೆ ಓಪನ್ ಆಗಿ ಹೇಳ್ತೇನೆ , ನಾನು ಬೆಂಬಲ ನೀಡುತ್ತೇನೆ ಎಂದಿದ್ದೆ ಅಷ್ಟು ಮಾಡ್ತೇನೆ , ಎಲ್ಲರ ಪರ ನಿಂತು ಪ್ರಚಾರ ಮಾಡಕ್ಕಾಗಲ್ಲ, ಸಿಎಂ ಬೊಮ್ಮಾಯಿ ಯಾರಿಗೆ ಹೇಳ್ತಾರೋ ಅವರಿಗೆ ಪ್ರಚಾರ ಮಾಡ್ತೇನೆ, ಸಿಎಂ ಹೇಳಿದಂತೆ ಪ್ರಚಾರ ಮಾಡ್ತೇನೆ, ಚುನಾವಣೆ ನಿಲ್ಲೋ ಬಗ್ಗೆ ಚರ್ಚೆ ಬೇಡ ಎಂದರು.
ಸಿಎಂ ಬೊಮ್ಮಾಯಿ ಮಾತನಾಡಿ, ಕಿಚ್ಚ ಸುದೀಪ್ ನನಗೆ ಮೊದಲಿನಿಂದಲೂ ಬೇಕಾದವರು, ಸುದೀಪ್ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ , ಪಕ್ಷ ಸೇರದೇ ಇದ್ದರೂ ನಿನ್ನ ಪ್ರಚಾರದ ಅಗತ್ಯವಿದೆ ಎಂದು ಹೇಳಿದ್ದೆ ,ಸುದೀಪ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ಆದರೆ ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡ್ತಾರೆ ನಾನು ಹೇಳಿದ ಕಡೆ ಸುದೀಪ್ ಪ್ರಚಾರ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.