ಹಾವೇರಿ: ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದ ಲೋಕಾಯುಕ್ತ ಮುಚ್ಚಿದರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಗ್ಯಾರಂಟಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರೆಕೇರೂರು ಪಟ್ಟಣದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ದಾಖಲಾಗಿರುವ 59 ಕೇಸ್ಗಳನ್ನು ಲೋಕಾಯುಕ್ತ ಸಂಸ್ಥೆಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದರು.
ನಮ್ಮ ಪಕ್ಷದಲ್ಲಿ ಇದ್ದವರು ಬಿಜೆಪಿಗೆ ಹೋಗಿ ಮಾತಾಡುತ್ತಿದ್ದಾರೆ ಅಂತಿರಾ. ನೀವೂ ಏನು ಮೊದಲಿನಿಂದಲೂ ಕಾಂಗ್ರೆಸ್ನಲ್ಲೆ ಇದ್ರಾ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಬಾಯಿಗೆ ಬಂದಂಗೆ ಮಾತಾಡಿ, ಇಂದು ಅದೇ ಪಕ್ಷಕ್ಕೆ ಹೋಗಿ ಸಿಎಂ ಆದ್ರಿ. ಇಂದು ವಿಪಕ್ಷ ನಾಯಕ ಆಗಿಲ್ವಾ ಎಂದು ಸುಧಾಕರ ಬಗ್ಗೆ ಟೀಕೆ ಮಾಡಿದ್ದ ಸಿದ್ಧರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.
ಹಾನಗಲ್ನಲ್ಲಿ ಬಂದು ಚುನಾವಣೆ ಮಾಡಿ ಹೋಗಿದಿಯಾ ಅಲ್ಲ, ಬಾರಣ್ಣಾ ಸಿದ್ಧರಾಮಣ್ಣಾ ಹಾನಗಲ್ ಕ್ಷೇತ್ರದಲ್ಲಿ ನಮ್ಮ ನೀರಾವರಿ ಕೊಡುಗೆ ನೊಡುವಂತೆ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ನೀಡಿದ್ದೇವೆ. ಬನ್ರಿ ಕಾಂಗ್ರೆಸ್ನವರೆ ಬಂದು ನೊಡ್ಕೊಂಡ್ ಹೋಗಿ. ಸ್ವಜನ ಪಕ್ಷ ಪಾತ, ಭ್ರಷ್ಟಾಚಾರದಿಂದ ಕೂಡಿ ಎಲ್ಲಾ ಭಾಗ್ಯ ದೌರ್ಬಾಗ್ಯದಿಂದ ಮನೆಗೆ ಕಳಿಸಿದರು. ಅನ್ನ ಭಾಗ್ಯ – 30 ರೂಪಾಯಿ ಮೋದಿಯವರು ಕೊಟ್ಟಿದ್ದು, 3 ರೂಪಾಯಿ ಸಿದ್ದರಾಮಯ್ಯ ಚೀಲ ಅಷ್ಟೇ ಎಂದರು.