ಬೆಂಗಳೂರು: ಸುರ್ಜೇವಾಲಾ ಮೀಸಲಾತಿಗೆ ಸಂಬಂಧಿಸಿದಂತೆ ಇತಿಹಾಸವನ್ನು ಓದಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮೀಸಲಾತಿ ಬಗ್ಗೆ ಮಾತನಾಡುವ ನೈತಿಕ, ರಾಜಕೀಯ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ. ಅವರ ಸರ್ಕಾರದ ಅವಧಿಯಲ್ಲಿ ಬೇಡಿಕೆ ಇದ್ದಾಗ ಏನೇನು ಮಾಡಿಲ್ಲ. ರಣದೀಪ್ ಸಿಂಗ್ ಸುರ್ಜೇವಾಲಾ ಇದರ ಬಗ್ಗೆ ಇತಿಹಾಸ ಓದಬೇಕು ಎಂದು ಸಲಹೆ ಕೊಡ್ತೀನಿ. ಮೀಸಲಾತಿ ಮಾಡಿ, ಕಾನೂನು ಮಾಡಿ ಅದರ ಪ್ರಕಾರ ನೇಮಕಾತಿ ಕೂಡ ಶುರುವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸುವಲ್ಲಿ ಬಿಜೆಪಿ ಸರ್ಕಾರ ಎಡವಿರುವುದೇ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ನಮಗೆ ದೊಡ್ಡ ಅಸ್ತ್ರಗಳಾಗಲಿವೆ ಎಂಬ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸಂವಿಧಾನದ ಶೆಡ್ಯೂಲ್ 9 ಕ್ಕೆ ಸೇರಿಸಲು ಸಚಿವ ಸಂಪುಟದ ಅನುಮೋದನೆಯಾಗಿದ್ದು, ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕಾನೂನು ಇಲಾಖೆ ಸಲಹೆ ಪಡೆದು ಪ್ರಕ್ರಿಯೆ ಜಾರಿಗೊಳಿಸಿದೆ. ಶೆಡ್ಯೂಲ್ 9 ಗೆ ಸೇರ್ಪಡೆ ಮಾಡುವ ಬದ್ಧತೆ ಸರ್ಕಾರಕ್ಕಿದೆ ಎಂದರು.