ಬೆಂಗಳೂರು: ನಂದಿನಿ ರೈತರು ಕಟ್ಟಿದ ಸಂಸ್ಥೆ, ಇದಕ್ಕೆ ಕೈ ಹಾಕಿದ್ರೆ ರಕ್ತ ಕ್ರಾಂತಿ ಆಗುತ್ತೆ ಹುಷಾರ್ ಎಂದು ಜೆಡಿಎಸ್ ಕಛೇರಿ ಯಲ್ಲಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಎಚ್ಚರಿಕೆ ಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ನಂದಿನಿ ಮತ್ತು ಅಮುಲ್ ಮರ್ಜ್ ಆಗಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನಂದಿನಿ ಯನ್ನು ಬಿಟ್ಟುಕೊಡೋ ಮಾತೇ ಇಲ್ಲ, ರೈತರು ಸುಮ್ಮನೆ ಇರಲ್ಲ ಎಂದು ಹೇಳಿದರು. ಇದೇ ವೇಳೆ ನಳೀನ್ ಕುಮಾರ್ ಕಟೀಲ್ ಲವ್ ಜಿಹಾದ್ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಪೋಲಿ ಹುಡುಗರು ಮಾತಾಡೋ ಮಾತುಗಳಿವು, ರಾಜ್ಯದ ಅಧ್ಯಕ್ಷರಾಗಿ ಈ ತರಾ ಮಾತಾಡಬಾರದು ಎಂದರು.
ಬಿಜೆಪಿಯಲ್ಲಿ ಕೆಲವರಿಗೆ ಮದ್ವೆನೇ ಆಗಿಲ್ಲ, ಇನ್ನು ಲವ್ ಬಗ್ಗೆ ಏನು ಗೊತ್ತು? ಮೊದಲು ಯುಪಿ ಸಿಎಂಗೆ ಲವ್ ಮಾಡೋಕೆ ಹೇಳಿ, ಆಮೇಲೆ ಜಿಹಾದ್ ಬಗ್ಗೆ ನೋಡಿ ಎಂದು ಕುಟುಕಿದ್ದಾರೆ.
ಇದೇ ವೇಳೆ ಪಂಚರತ್ನ ಯಾತ್ರೆ ಬಗ್ಗೆ ಮಾತನಾಡಿ, ಪಂಚರತ್ನ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲಿ ಜನ ಸೇರ್ತಾ ಇದ್ದಾರೆ, ಸಾಲ ಮನ್ನಾ ಯೋಜನೆಯಿಂದ ಉಪಯೋಗ ಪಡೆದ ಜನ ಪ್ರತಿ ಕ್ಷೇತ್ರದಲ್ಲಿ ಇದ್ದಾರೆ, ಅವರೆಲ್ಲರಿಗೂ ನಾನು ಕುಮಾರಸ್ವಾಮಿ ಪ್ರತ್ಯೇಕವಾಗಿ ಪತ್ರ ಬರೀತೀವಿ ಎಂದು ಹೇಳಿದ್ರು.
ಜೆಡಿಎಸ್ ಪಂಚರತ್ನ ಯಾತ್ರೆ ನೋಡಿ ಬಿಜೆಪಿಗೆ ಭಯ ಬಂದಿದೆ, ಬಹಳ ಸಂತೋಷ ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ ಅವರನ್ನು ಕರೆದುಕೊಂಡ್ರಲ್ಲಾ..ಈಗ ಕರೆದುಕೊಳ್ಳಿ ನೋಡೋಣ, ತಾಖತ್ ಇದ್ರೆ ನೀವು ಮಕ್ಕಳನ್ನು ಹುಟ್ಟಿಸಿ, ಬೇರೆ ಪಕ್ಷದಿಂದ ಯಾಕೆ ಕರೆದು ಕೊಳ್ತೀರಾ ಎಂದು ಪ್ರಶ್ನಿಸಿದರು.
ಬಾಂಬೆ ಕ್ಯಾಸೆಟ್ ವಿಚಾರದಲ್ಲಿ ಹುಡುಗಿಯೊಬ್ಬಳು ಕೊಟ್ಟಿರುವ ದೂರನ್ನು ಸರಿಯಾದ ದಿಕ್ಕಿನಲ್ಲಿ ತನಿಖೆ ಮಾಡಿ ಅಂತಾ ಪೋಲಿಸ್ ಅಧಿಕಾರಿಗಳಿಗೆ ವಿನಂತಿ ಮಾಡ್ತೀನಿ, ಈ ಸರ್ಕಾರದ ಆಯಸ್ಸು ಇನ್ನು ಮೂರು ತಿಂಗಳು ಮಾತ್ರಾ.ದಯವಿಟ್ಟು ಸರಿಯಾದ ದಿಕ್ಕಿನಲ್ಲಿ ತನಿಖೆ ಮಾಡಿ ಎಂದು ಮನವಿ ಮಾಡಿದರು.