Tuesday, March 28, 2023
spot_img
- Advertisement -spot_img

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮಧ್ಯೆ ಪ್ಯಾರು ಆಗ್ತಿಲ್ಲ,ಲವ್ ಆಗ್ತಿಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಚಿಕ್ಕಮಗಳೂರು: ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಮಧ್ಯೆ ಪ್ಯಾರು ಆಗ್ತಿಲ್ಲ, ಲವ್ವು ಆಗ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಜನರ ಮುಂದೆ “ಆವೋ ನಾ ಪ್ಯಾರ್ ಕರೇ ಎಂದು ಹೋಗ್ತಿದ್ದಾರೆ. ಆದ್ರೆ, ಜನರ ಎದುರು ಕೈ ಹಿಡಿದು ಓಡಾಡಿದ್ರೆ ಪ್ರಯೋಜನವಿಲ್ಲ, ಆತ್ಮಗಳು ಒಂದಾಗಬೇಕು. ಅಷ್ಟೆಲ್ಲಾ ಪ್ರೀತಿ ಇದ್ದರೆ ಮುಂದಿನ ಸಿಎಂ ಯಾರು ಅಂತ ಹೇಳಲಿ ನೋಡೋಣ ಎಂದರು. ನಮಗೆ ಲವ್ ಇದೆ, ವಿವಾದ ಇಲ್ಲ. ನಮ್ಮ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಂದು ಹೇಳಿದರು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತ ಡಿಕೆಶಿ ಹೇಳಲಿ ನೋಡೋಣ. ಇಲ್ಲ, ಡಿಕೆಶಿ ಮುಂದಿನ ಸಿಎಂ ಅಂತ ಸಿದ್ದರಾಮಯ್ಯ ಹೇಳಲಿ ನೋಡೋಣ. ಇವರಿಬ್ಬರು ಬೇಡ ಪರಮೇಶ್ವರ್ ಅಥವಾ ಖರ್ಗೆ ಅಂತ ಹೇಳ್ತಾರಾ? ಲವ್ ಇದೆಯಾ ಇವರಿಗೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನರಿಗೆ ಸಿಎಂ ಯಾರು ಅಂತ ಹೇಳುವ ಶಕ್ತಿ ಇಲ್ಲ, ಹೇಳಿದ ದಿನ ಪಾರ್ಟಿ ಒಡೆದು ಹೋಗುತ್ತದೆ. ಬಿಜೆಪಿ-ಕಾಂಗ್ರೆಸ್ ಇಬ್ಬರದ್ದೂ ಅದೇ ಹಣೆಬರಹ. ನಾವು 93 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅನೌನ್ಸ್ ಮಾಡಿದ್ದೇವೆ, ಕಾಂಗ್ರೆಸ್ ಒಂದೂ ಮಾಡಿಲ್ಲ. ನೀವು ಅವರನ್ನ ಕೇಳೋದೇ ಇಲ್ಲ, ನಮ್ಮನ್ನ ಮಾತ್ರ ಕೇಳ್ತೀರಾ ಎಂದು ಪ್ರಶ್ನಿಸಿದರು.

Related Articles

- Advertisement -

Latest Articles