ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್ ಪಾಲಿಟಿಕ್ಸ್ ನೆಲಕಚ್ಚಿದೆ. ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರದಲ್ಲಿ ನಿಲ್ಲೋದಿಲ್ಲ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಮೇಲೆ ಹಾಕಿ ಬೇರೆ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಬಲಿಕೊಡಲು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ . ನಗರದಲ್ಲಿ , ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದ ಬಂದು ನಿಲ್ಲುತ್ತಿದ್ದಾರೆ. ಅಲ್ಪಸಂಖ್ಯಾತ ಮುಖಂಡ ಸಿಎಂ ಇಬ್ರಾಹಿಂ ಅವರನ್ನು ಕಡೆಗಣಿಸಿದ ಅವರಿಗೆ ಮುಸಲ್ಮಾನರು ಪಾಠ ಕಲಿಸ್ತಾರೆ. ಅಹಿಂದ ನಾಯಕ ಸಿದ್ದರಾಮಯ್ಯಗೆ ಅ ತೆಗೆದು ಹಿಂದ ಮಾಡಿದ್ದಾರೆ. ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದವರು ಇವತ್ತು ಕಾಂಗ್ರೆಸ್ಗೆ ಮತ ಕೇಳುತ್ತಿದ್ದಾರೆ. ಎಂಎಲ್‌ಸಿಚುನಾವಣೆಯಲ್ಲಿ ಕಾಂಗ್ರೆಸ್ ಹಣ ಪಡೆದು ಶ್ರೀನಿವಾಸಗೌಡರಿಂದ ಬಿಜೆಪಿಗೆ ಮತ ಹಾಕಿಸಿದರು ಎಂದು ಕಿಡಿಕಾರಿದರು.
ಇನ್ನು ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಾಥ ಬದಲಾವಣೆ ಇಲ್ಲ, ಗೆಲುವುದು ಖಚಿತ. ನನ್ನ ಉಳಿಸಿಕೊಳ್ಳಲು ಆಗಿಲ್ಲ. ಕೆ.ಹೆಚ್. ಮುನಿಯಪ್ಪರನ್ನು ಸೋಲಿಸಿದವರಿಗೆ ಅವರ ಸಮುದಾಯ ಪಾಠ ಕಲಿಸುತ್ತದೆ. ಇದು ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಅಲ್ಲ, ಇಬ್ರಾಹಿಂ ಹಾಗಾಗಿ ಮುಸ್ಲಿಂ ಜೆಡಿಎಸ್ಪರ ನಿಲ್ತಾರೆ ಎಂದು ತಿಳಿಸಿದರು.