Monday, December 11, 2023
spot_img
- Advertisement -spot_img

ನಾಲ್ಕು ನಗರಗಳಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ!

ನವದೆಹಲಿ: ದೀಪಾವಳಿ ಹಬ್ಬದ ಬಳಿಕ ಜನೆತೆಗೆ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿದ್ದು, ನಾಲ್ಕು ಮೆಟ್ರೋ ನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ದರ ಕಡಿತಗೊಂಡಿದೆ. 19 ಕೆ.ಜಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 57.5 ರೂ.ವರೆಗೆ ಕಡಿತಗೊಳಿಸಲಾಗಿದೆ.

ಈ ದರವು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರದಲ್ಲಿ ಮಾತ್ರ ಇಳಿಕೆಯಾಗಿದೆ. ದೀಪಾವಳಿಗೂ ಮೊದಲು ಪ್ರತಿ ಸಿಲಿಂಡರ್‌ಗೆ 101.5 ರೂ. ನಿಗದಿಯಾಗಿತ್ತು. ಇದೀಗ ಪರಿಷ್ಕೃತ ದರದ ಪ್ರಕಾರ ಪ್ರತಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ನವದೆಹಲಿಯಲ್ಲಿ 1,775.5, ಕೋಲ್ಕತ್ತಾದಲ್ಲಿ 1,885.5, ಮುಂಬೈನಲ್ಲಿ 1,728 ಮತ್ತು ಚೆನ್ನೈನಲ್ಲಿ 1,942 ರೂ.ಗೆ ಇಳಿಕೆಯಾಗಿದೆ.

ಇದನ್ನೂ ಓದಿ: ಮಧ್ಯ ಪ್ರದೇಶ ಚುನಾವಣೆ: ಮತಗಟ್ಟೆಯಲ್ಲಿ ಸೆಲ್ಫಿಗಾಗಿ AI ಕ್ಯಾಮೆರಾ, ಆನ್‌ಲೈನ್’ನಲ್ಲಿ ಟೋಕನ್ ವ್ಯವಸ್ಥೆ!

ವಾಣಿಜ್ಯ LPG ಬೆಲೆಗಳು ಇಳಿಕೆ ಕಂಡಿದ್ದರೂ, ಗೃಹ ಬಳಕೆ LPG ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ. ಈ ತಿಂಗಳ ಆರಂಭದಲ್ಲಿ, ONC ಗಳು ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ದೇಶಾದ್ಯಂತ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಣೆಗಳಿಗೆ ಒಳಗಾಗುತ್ತವೆ.

ಇದನ್ನೂ ಓದಿ: ಮ.ಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆ: ಇಂದು ಮತದಾನ..!

ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆ ಕಡಿತವು ಅಡುಗೆ ಉದ್ದೇಶಗಳಿಗಾಗಿ LPG ಅನ್ನು ಹೆಚ್ಚು ಅವಲಂಬಿಸಿರುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವ್ಯವಹಾರಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles