Monday, December 11, 2023
spot_img
- Advertisement -spot_img

ಸಾಂವಿಧಾನಿಕ ಮೌಲ್ಯ ಕಾಪಾಡಲು ಬದ್ಧರಾಗಿರಿ : ಸಂಸತ್ ಸದಸ್ಯರಿಗೆ ಖರ್ಗೆ ಕರೆ

ನವದೆಹಲಿ : ಸಾಂವಿಧಾನಿಕ ಮೌಲ್ಯಗಳು ಮತ್ತು ಸಂಸದೀಯ ಸಂಪ್ರದಾಯಗಳನ್ನು ಕಾಪಾಡಲು ಬದ್ಧರಾಗಿರಿ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನ ಸದಸ್ಯರಲ್ಲಿ ಮನವಿ ಮಾಡಿದರು.

ಹಳೆಯ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್ ನಲ್ಲಿ ನಡೆದ ವಿದಾಯ ಕಾರ್ಯಕ್ರಮದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಂದಾಗಬೇಕು ಎಂದು ಹೇಳಿದರು. ಸಾಂವಿಧಾನಿಕ ಮೌಲ್ಯಗಳು ಮತ್ತು ಆದರ್ಶಗಳ ಪಾಲನೆಯಲ್ಲಿ ಸಂಸತ್ ನ ಯಶಸ್ಸು ಅಡಗಿದೆ. ಸರ್ವ ಸಂಸದರ ಸಾಮೂಹಿಕ ಪ್ರಯತ್ನಗಳು ಭಾರತದ ಅಭಿವೃದ್ಧಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ ಎಂದರು.

ಇದನ್ನೂ ಓದಿ : ನವ ಭವಿಷ್ಯ ಸೃಷ್ಟಿಗೆ ಹೊಸ ಸಂಸತ್ ಭವನದತ್ತ ಹೆಜ್ಜೆ : ಪ್ರಧಾನಿ ಮೋದಿ

ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಮಲ್ಲಿಕಾರ್ಜುನ ಖರ್ಗೆ ತನ್ನ ಭಾಷಣದಲ್ಲಿ ಸ್ಮರಿಸಿದರು. ಸಂವಿಧಾನ ರಚನಾ ಸಭೆ, ತಾತ್ಕಾಲಿಕ ಸಂಸತ್ತು ಮತ್ತು ನಂತರದ ಎಲ್ಲಾ ಲೋಕಸಭೆಗಳ ಸದಸ್ಯರ ಸಾಮೂಹಿಕ ಕೊಡುಗೆಗಳನ್ನು ನೆನಪು ಮಾಡಿಕೊಂಡರು.

ಸೋಮವಾರ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ನೆಹರೂ ಅವರನ್ನು ನೆನಪಿಸಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖರ್ಗೆ ಧನ್ಯವಾದ ಅರ್ಪಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles