Sunday, March 26, 2023
spot_img
- Advertisement -spot_img

ಈಶ್ವರಪ್ಪ ಸೃಷ್ಟಿಸಿದ ಕೋಮುವಾದಿ ವಾತಾವರಣದಿಂದ ಜಿಲ್ಲೆಯ ಕೀರ್ತಿಗೆ ಚ್ಯುತಿ ಬಂದಿದೆ

ಶಿವಮೊಗ್ಗ : ಜಿಲ್ಲೆಯಲ್ಲಿ ಈಶ್ವರಪ್ಪ ಸೃಷ್ಟಿಸಿದ ಕೋಮುವಾದಿ ವಾತಾವರಣದಿಂದ ಜಿಲ್ಲೆಯ ಕೀರ್ತಿಗೆ ಚ್ಯುತಿ ಬಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಮುವಾದದ ವಾತಾವರಣದಿಂದ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಯಾವುದೇ ದೊಡ್ಡ ಉದ್ಯಮಿಗಳು ಸಿದ್ಧರಿಲ್ಲ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾದಾಗ ಈಶ್ವರಪ್ಪ ಸಚಿವರಾಗಿದ್ದಾಗ ನಿಷೇಧಾಜ್ಞೆ ಉಲ್ಲಂಘಿಸಿ ಶವಯಾತ್ರೆ ನಡೆಸಿದರು. ಈ ಕೃತ್ಯವನ್ನು ಸಮರ್ಥಿಸಬಹುದೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ದರಾಮಯ್ಯ, ‘ಶೀಘ್ರದಲ್ಲೇ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಈಶ್ವರಪ್ಪ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜಿಲ್ಲೆಗೆ 5,000 ಕೋಟಿ ರೂಪಾಯಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸುವ ಧೈರ್ಯ ಇದೆಯೇ..? ಪ್ರಶ್ನಿಸಿದರು. ಇನ್ನೂ ಡಿಕೆಶಿವಕುಮಾರ್‌ ಮಾತನಾಡಿ, ‘ರಾಜ್ಯದಲ್ಲಿ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಹಲವಾರು ದೊಡ್ಡ ನಾಯಕರು ಚುನಾವಣೆಯಲ್ಲಿ ಸೋತ ವಾತಾವರಣವೇ ಇದೆ. ಅರಣ್ಯವಾಸಿಗಳ ಭೂಹಕ್ಕು, ಶರಾವತಿ ಯೋಜನೆ ತೆರವುಗೊಂಡವರ ಪುನರ್ವಸತಿ, ಮಲೆನಾಡು ಮತ್ತು ಕರಾವಳಿ ಭಾಗದ ಅಡಿಕೆ ಬೆಳೆಗಾರರ ​​ಸಮಸ್ಯೆಗಳ ಪರಿಹಾರಕ್ಕೆ ಪಕ್ಷದ ಮುಖಂಡ ರಮೇಶ್ ಹೆಗಡೆ ಅವರನ್ನೊಳಗೊಂಡ ಸಮಿತಿ ರಚಿಸಿ, ಒಂದು ತಿಂಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

Related Articles

- Advertisement -

Latest Articles