ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಆರಿಸೋದ್ರಲ್ಲಿ ಇನ್ನೂ ಗೊಂದಲದಲ್ಲಿದ್ದಾರೆ. ಈ ಕಡೆ ಬೇರೆ ಪಕ್ಷಗಳು ಸಿದ್ದರಾಮಯ್ಯರನ್ನು ಟೀಕಿಸುತ್ತಿವೆ. ಒಂದು ಕಡೆ ಸಿದ್ದರಾಮಯ್ಯ ಅಭಿಮಾನಿಗಳು ಪ್ರಾಟೆಸ್ಟ್ ಮಾಡ್ತಿದ್ದಾರೆ.
ಕೋಲಾರದಲ್ಲಿ ನಿಲ್ಲಿ ನಿಮ್ಮನ್ನು ಗೆಲ್ಲಿಸ್ತೇವೆ ಎಂದು ಮನವಿ ಮಾಡ್ತಾ ಇದ್ದಾರೆ. ಇನ್ನೋಂದು ಕಡೆ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯವರು ಸದ್ಯದಲ್ಲೇ ನಿರ್ಧಾರ ಪ್ರಕಟಿಸ್ತಾರೆ ಎಂದು ಹೇಳ್ತಾ ಇದ್ದಾರೆ, ವರುಣಾ, ಕೋಲಾರ, ಬಾದಾಮಿ ಯಾವ ಕ್ಷೇತ್ರ ಆರಿಸಿಕೊಳ್ಳುತ್ತಾರೆ ಅನ್ನೋದು ಮಾತ್ರ ಸಿದ್ದರಾಮಯ್ಯ ಬಿಟ್ಟು ಕೊಟ್ಟಿಲ್ಲ, ಇದ್ರ ನಡುವೆ ಸಿದ್ದರಾಮಯ್ಯ ಮನೆ ಮುಂದೆ ಅಭಿಮಾನಿಗಳು ಪ್ರತಿಭಟಿಸಿದ್ದು,ಮನೆಯವರ ಜೊತೆಗೆ, ಹಿತೈಷಿಗಳ ಜೊತೆಗೆ ನಿರ್ಧರಿಸಿ ನನ್ನ ನಿರ್ಧಾರ ಪ್ರಕಟಿಸ್ತೇನೆ ಎಂದು ತಿಳಿಸಿದ್ದರು, ಹೀಗಾಗಿ ಆಯ್ಕೆಯ ಗೊಂದಲದಲ್ಲಿರುವ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಪುತ್ರ ಯತೀಂದ್ರರ ಅಭಿಪ್ರಾಯ ಕೇಳಿದ್ದಾರೆ.
ಇಬ್ಬರು ನೀಡಿದ ಸಲಹೆಗಳು ಸಿದ್ದರಾಮಯ್ಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಬೇಡಿ. ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿ ಎಂದು ಪತ್ನಿ ಸಲಹೆ ಕೊಟ್ಟಿದ್ದರು. ಆದರೆ ಈ ಸಲಹೆ ಪರಿಗಣಿಸದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ವಿರುದ್ಧ ನಿಂತು ಸೋಲು ಅನುಭವಿಸಿದ್ದರು.
ವರುಣಾಗೆ ಹೋಗಿ ಮಗನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಮಗನ ರಾಜಕೀಯ ಭವಿಷ್ಯ ಒಮ್ಮೆ ಬಿದ್ದರೆ ಮತ್ತೆ ಏಳುವುದು ಕಷ್ಟವಾಗುತ್ತದೆ. ಹೀಗಾಗಿ ವರುಣಾದಲ್ಲಿಮಗನನ್ನು ಗೆಲ್ಲಿಸಿ ಒಂದು ಅವಧಿಗೆ ಮಂತ್ರಿ ಮಾಡಿ. ನೀವು ಕೋಲಾರಕ್ಕೆ ಹೋದರೆ ಗೆಲ್ಲಬಹುದು ಎಂದು ಪತ್ನಿ ಪಾರ್ವತಿ ಸಲಹೆ ನೀಡಿದ್ದಾರೆ. ಕೋಲಾರದಲ್ಲಿ ಹೇಳಿದಷ್ಟು ಸುಲಭ ಇಲ್ಲ.
ಕೊನೆಯ ಚುನಾವಣೆಯಲ್ಲಿ ವಿಪರೀತ ರಿಸ್ಕ್ ತೆಗೆದುಕೊಳ್ಳುವುದು ಬೇಡ. ವರುಣಾ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದು. ನಾನು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ನಿಮ್ಮನ್ನು ಗೆಲ್ಲಿಸಿಕೊಡುತ್ತೇನೆ ಎಂದು ಪುತ್ರ ಯತೀಂದ್ರ ಹೇಳಿದ್ದಾರೆ. ಇದ್ರಿಂದಾಗಿ ಸಿದ್ದರಾಮಯ್ಯರಲ್ಲಿ ಮತ್ತೆ ಗೊಂದಲ ಹೆಚ್ಚಾಗಿದ್ದು, ಯಾವ ಕ್ಷೇತ್ರ ಆರಿಸಿಕೊಳ್ತಾರೆ ಅನ್ನೋದು ಕುತೂಹಲಕಾರಿಯಾಗಿದೆ.