ನವದೆಹಲಿ: ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಗೆಲ್ಲುತ್ತೇವೆ ಬಹುಶಃ ತೆಲಂಗಾಣದಲ್ಲೂ ಗೆಲ್ಲುತ್ತೇವೆ ಆದರೆ ರಾಜಸ್ಥಾನದಲ್ಲಿ ಕಠಿಣ ಸ್ಪರ್ಧೆಯಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಅಚ್ಚರಿ ಕಾದಿರಲಿದೆ ಎಂದು ಮೈತ್ರಿಕೂಟದ ಗೆಲುವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಪ್ರತಿದಿನ್ ಮೀಡಿಯಾ ನೆಟ್‌ವರ್ಕ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯು ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ. ನೈಜ ಸಮಸ್ಯೆಗಳ ಕಡೆ ಜನರು ಗಮನ ಕೇಂದ್ರೀಕರಿಸದಂತೆ ಕೇಂದ್ರವು ಇಂತಹ ಗಮನ ಸೆಳೆಯುವ ತಂತ್ರ ಮಾಡುತ್ತಿದೆ ಎಂದರು.
ಇದನ್ನೂ ಓದಿ: Mann Ki Baat: ಜರ್ಮನಿಯ ಕ್ಯಾಸ್ಮೆ ಹಾಡಿದ ಕನ್ನಡ ಹಾಡಿಗೆ ಮೋದಿ ಶ್ಲಾಘನೆ
ಭಾರತದಲ್ಲಿ ಸಂಪತ್ತಿನಲ್ಲಿ ಭಾರಿ ಅಸಮಾನತೆ ಇದೆ, ಬೃಹತ್ ನಿರುದ್ಯೋಗ, ಕೆಳಜಾತಿ, ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಭಾರಿ ಅನ್ಯಾಯ ಮತ್ತು ಬೆಲೆ ಏರಿಕೆ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ ಇಂತಹ ಸಮಸ್ಯೆಗಳ ಕಡೆ ಬಿಜೆಪಿ ಎಂದಿಗೂ ಚಿಂತಿಸಿಲ್ಲ ಎಂದಿದ್ದಾರೆ.
ಪ್ರತಿ ಬಾರಿ ನಾವು ಅವರ ಮುಂದೆ ಸಮಸ್ಯೆಗಳ ತಂದಾಗ ಅವರು ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ವಿಷಯವನ್ನು ಬಳಸುತ್ತಾರೆ ಮತ್ತು ಅದನ್ನು ಹೇಗೆ ಎದುರಿಸಬೇಕೆಂದು ನಾವೀಗ ಈಗ ಕಲಿತಿದ್ದೇವೆ. ಕರ್ನಾಟಕದಲ್ಲಿ ನಾವು ಏನು ಮಾಡಿದ್ದೇವೆ ಎಂದರೆ ಆ ರಾಜ್ಯಕ್ಕೆ ಸ್ಪಷ್ಟವಾದ ದೃಷ್ಟಿಕೋನ ನೀಡಿದ್ದೇವೆ. ಅದು ನಾವು ನೀಡಿರುವ ಸಾಮಾಜಿಕ ಭದ್ರತೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.