ರಾಯಚೂರು : ಭಾರತದ ತಂತ್ರಜ್ಞಾನದ ಇತಿಹಾಸದಲ್ಲಿ ಇಂದು ಮರೆಯಲಾರದ ದಿನ ಎಂದು ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿನಂದನೆ ಸಲ್ಲಿಸಿದರು.
ಚಂದ್ರಯಾನ 3 ಈಗಷ್ಟೇ ಲ್ಯಾಂಡ್ ಆಗಿರೋದು ಅತ್ಯಂತ ಹೆಮ್ಮೆಯ ವಿಷಯ, ಈಗಾಗಲೇ ನಮ್ಮ ಪ್ರಾಚೀನ ಭಾರತ ಇತಿಹಾಸದಲ್ಲಿ ವೇದ,ಪುರಾಣಗಳಲ್ಲಿ ಖುಷಿ ಮುನಿಗಳು ತಂತ್ರಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ, ಎಲ್ಲದರ ಶ್ರೀಮಂತಿಕೆ ನಮ್ಮ ದೇಶದ್ದಾಗಿದೆ ಎಂದರು.
ಇದನ್ನೂ ಓದಿ : ‘ಸಿಟಿ ರವಿಗೆ ಮರ್ಯಾದೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ’
ಇಂದು ನಮ್ಮ ಇಸ್ರೋ ಸಂಸ್ಥೆ ವಿಜ್ಞಾನಿಗಳು, ಬಹು ಪರಿಶ್ರಮದಿಂದ ರೂಪಿಸಿರೋ ಚಂದ್ರಯಾನ 3 ಯಶಸ್ವಿಯಾಗಿದೆ.. ಇದು ಅಭಿನಂದನಾ ವಿಷಯ, ಭಗವಂತನ ಅನುಗೃಹ,ಹರಿ ಗುರುಗಳ ವಿಶೇಷ ಕೃಪೆ,ವಿಜ್ಞಾನಿಗಳ ಪರಿಶ್ರಮ,ನಮ್ಮ ಭಾರತ ಸರ್ಕಾರದ ಪ್ರೋತ್ಸಾಹ ಎಲ್ಲ ಜನರ ಶುಭ ಹಾರೈಕೆ ಹಿನ್ನೆಲೆ..ಚಂದ್ರಯಾನ 3 ಯಶಸ್ಸು ಕಂಡಿದೆ.. ಇದನ್ನು ತುಂಬಾ ಅಭಿನಂದಿಸುತ್ತೇನೆ, ಈ ರೀತಿ ಹತ್ತು ಹಲವು ಸಂಶೋಧನೆಗಳು ನಮ್ಮ ದೇಶದ ವಿಜ್ಞಾನಿಗಳಿಂದ ಮೂಡಿ ಬರಲಿ..ನಮ್ಮ ದೇಶದ ಕೀರ್ತಿ ಪತಾಕೆ ಬೆಳಗಲಿ ಎಂದು ಹಾರೈಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.