ಶಿವಮೊಗ್ಗ : ಚಂದ್ರಯಾನ ಯಶಸ್ವಿಯಾಗುವುದನ್ನ ನಮ್ಮ ಕಣ್ಣಿಂದ ನೋಡುವ ಸೌಭಾಗ್ಯ ಭಾರತಕ್ಕೆ ಸಿಕ್ಕಿದ್ದು ನಮ್ಮೆಲ್ಲರ ಪುಣ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಚಂದ್ರಯಾನ-3 ಯಶಸ್ವಿ ಹಿನ್ನಲೆ ಪ್ರಪಂಚದ ಮೊದಲನೇ ರಾಷ್ಟ್ರ ನಮ್ಮದು, ಇಂದು ಇಡೀ ಪ್ರಪಂಚ ನಮ್ಮನ್ನ ಕೊಂಡಾಡುತ್ತಿದೆ, ಭಾರತೀಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ನಮ್ಮ ದೇಶದ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಎಂದು ಸಂತಸಪಟ್ಟರು.
ಬರುವಂತಹ ದಿನಗಳಲ್ಲಿ ದೇಶ ಒಂದು ಜಗತ್ತು ಎಂಬುದನ್ನು ಪ್ರಧಾನಿಗಳು ಹೇಳಿದ್ದಾರೆ ಆ ದಿಕ್ಕಿನಲ್ಲಿ ನಾವು ಯಶಸ್ವಿಯಾಗೋಣ, ಆ ವಿಜ್ಞಾನಿಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸುತ್ತೇನೆ. ಚಂದ್ರನ ದಕ್ಷಿಣ ಭಾಗಕ್ಕೆ ಮೊದಲನೇ ಬಾರಿ ಭಾರತೀಯ ಚಂದ್ರಯಾನ ಹೋಗಿ ಅಲ್ಲಿ ಯಶಸ್ವಿ ಆಗಿರುವುದು ಭಾರತೀಯರಾದ ನಮಗೆ ಹೆಮ್ಮೆ, ಈಗ ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿ ನಾವು ಇದ್ದೇವೆ ಎನ್ನುವ ಗರ್ವ ಕೂಡ ನಮಗಿದೆ, ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ : ‘ಸಿಟಿ ರವಿಗೆ ಮರ್ಯಾದೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ’
ನಟ ಪ್ರಕಾಶ್ ರಾಜ್ ವ್ಯಂಗ್ಯ ಚಿತ್ರದ ಮೂಲಕ ಟೀಕೆ ವಿಚಾರವಾಗಿ ಮಾತನಾಡಿ, ನನ್ನ ಬಾಯಲ್ಲಿ ಯಾಕೆ ಕೆಟ್ಟದು ಹೇಳಿಸುತ್ತೀರಾ? ಪ್ರಕಾಶ್ ರಾಜ್ ಅವರ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಲು ಇಚ್ಛೆಪಡಲ್ಲ. ದೇಶಕ್ಕೆ, ದೇಶದ ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದನ್ನ ಅವರು ದೊಡ್ಡವರಾಗಿ ಕ್ಷಮೆ ಕೇಳಬೇಕು, ಕ್ಷಮೆ ಕೇಳುವುದು ಬಿಡುವುದು ಅವರಿಗೆ ಬಿಡುತ್ತೇನೆ. ದೇಶದ ವಿಜ್ಞಾನಿಗಳು ಪೂಜೆ ಪುನಸ್ಕಾರ ಮಾಡಿದ್ದು ಕೂಡ ಅವರನ್ನು ಕಾಪಾಡಿದೆ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.